ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಮತ್ತಷ್ಟು ಜನ ಭಾಗಿಯಾರುವ ಶಂಕೆ ಇದೆ. ಇದೀಗ ಘಟನೆಯಲ್ಲಿ ಆರೋಪಿಗಳ ಸಂಖ್ಯೆ 13ರಿಂದ 17ಕ್ಕೇ ಏರಿಕೆ ಆಗಿದೆ.
ಪ್ರಕರಣದಲ್ಲಿ 17 ಆರೋಪಿಗಳ ಪೈಕಿ ಈಗಾಗಲೇ 13 ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ. ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದ್ದು, ನಾಪತ್ತೆಯಾಗಿರುವವರಿಗಾಗಿ ಪೊಲೀಸರಿಂದ ಇದೀಗ ಶೋಧ ಕಾರ್ಯ ಆರಂಭವಾಗಿದೆ. ನಾಪತ್ತೆಯಾಗಿರುವ ನಾಲ್ವರು ದರ್ಶನ್ ಆಪ್ತರು ಎನ್ನಲಾಗುತ್ತಿದೆ.
ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಮೇಸೆಜ್ ಮಾಡಿದ್ದರು ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ. ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ವಿ. ವಿನಯ್, ಎಸ್. ಪ್ರದೋಶ್, ಎಂ. ಲಕ್ಷ್ಮಣ್, ಆರ್. ನಾಗರಾಜು, ಕೆ. ಪವನ್ ಮುಂತಾದವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದೀಗ ನಾಪತ್ತೆಯಾಗಿರುವ ಇನ್ನೂ ನಾಲ್ವರಿಗೆ ಹುಡುಕಾಟ ಮುಂದುವರೆದಿದೆ.