ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಎಂಡ್ ಗ್ಯಾಂಗ್ ಅರೆಸ್ಟ್ ಆಗಿದೆ. ಮೊದಲ ದಿನ ದರ್ಶನ್ ಎಂಡ್ ಟೀಂಗೆ ಪೊಲೀಸರು ಭರ್ಜರಿ ಬಿರಿಯಾನಿ ತರಿಸಿಕೊಟ್ಟಿದ್ದರು.ಇದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಜನ ಸಾಮಾನ್ಯರಿಗೆ ಒಂದು ನ್ಯಾಯಾ? ಸೆಲೆಬ್ರಿಟಿಗಳಿಗೆ ಒಂದು ನ್ಯಾಯಾ? ತಪ್ಪು ಯಾರೇ ಮಾಡಿರಲಿ ಅದು ತಪ್ಪೇ ಎಂದು ಜನ ಆಕ್ರೋಶ ಹೊರ ಹಾಕಿದ್ದರು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರೋ . ಪೊಲೀಸರು ದರ್ಶನ್ ಹಾಗೂ ಗ್ಯಾಂಗ್ಗೆ ಅನ್ನ-ಸಾರು ನೀಡಿದ್ದಾರೆ.
ಕೊಲೆ ಪ್ರಕರಣದಲ್ಲಿ ದರ್ಶನ್ ರನ್ನು ಜೂನ್ 11ರಂದು ಅರೆಸ್ಟ್ ಮಾಡಲಾಯಿತು. ಅಂದು ರಾತ್ರಿ ದರ್ಶನ್ ಹಾಗೂ ಅವರ ಗ್ಯಾಂಗ್ಗೆ ಬಿರಿಯಾನಿ ನೀಡಲಾಗಿತ್ತು. ಜೈಲಿನ ಹೊರ ಭಾಗದಲ್ಲಿ ಬಿರಿಯಾನಿ ಬಾಕ್ಸ್ ಕಾಣಿಸಿತ್ತು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದರಿಂದ ಪೊಲೀಸರು ಸಂಕಷ್ಟ ಅನುಭವಿಸಿದ್ದಾರೆ. ಈ ಘಟನೆಯಿಂದ ಅವರು ಎಚ್ಚೆತ್ತುಕೊಂಡಿದ್ದಾರೆ.
ಕೊಲೆ ಆರೋಪಿಗಳಿಗೆ ಬಿರಿಯಾನಿ ನೀಡಿದ್ದಕ್ಕೆ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳು ಗರಂ ಆಗಿದ್ದಾರೆ ಎನ್ನುವ ಮಾತೂ ಇದೆ ಎನ್ನಲಾಗಿದೆ. ಬಿರಿಯಾನಿ ನೀಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಅನೇಕರು ಇದನ್ನು ಟೀಕಿಸುತ್ತಿದ್ದಾರೆ. ಸಾಮಾನ್ಯ ವ್ಯಕ್ತಿ ಹೋಗಿದ್ದರೆ ಅವರಿಗೆ ಬಿರಿಯಾನಿ ನೀಡುತ್ತಿದ್ದರೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಪೊಲೀಸರು ಬುಧವಾರ (ಜೂನ್ 12) ರಾತ್ರಿ ಆರೋಪಿಗಳಿಗೆ ಅನ್ನ ಸಾರು ನೀಡಿದ್ದರು. ಊಟದ ಬಳಿಕ ತಡರಾತ್ರಿವರೆಗೂ ಪೊಲೀಸರಿಂದ ವಿಚಾರಣೆ ನಡೆದಿದೆ. ವಿಚಾರಣೆ ನಡೆಸಿ ಆರೋಪಿಗಳಿಂದ ಮತ್ತಷ್ಟು ಮಾಹಿತಿ ಕಲೆ ಹಾಕಲಾಗಿದೆ. ಸಿಸಿಟಿವಿ ದೃಶ್ಯ, ಸಿಡಿಆರ್, ಟವರ್ ಡಂಪ್ ಸೇರಿದಂತೆ ಟೆಕ್ನಿಕಲ್ ಎವಿಡೆನ್ಸ್ಗಳನ್ನ ಮುಂದಿಟ್ಟುಕೊಂಡು ವಿಚಾರಣೆ ಮಾಡಲಾಗಿದೆ. ‘ನನಗೇನು ಗೊತ್ತಿಲ್ಲ’ ಎಂದಷ್ಟೇ ದರ್ಶನ್ ಹೇಳುತ್ತಿದ್ದಾರೆ. ಇಂದು ಮತ್ತಷ್ಟು ವಿಚಾರಣೆ ನಡೆಯಲಿದೆ.