ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ಮಗುವಿನ ಕತ್ತು ಸೀಳಿ ಒಲೆಯ ಮೇಲೆ ಸುಡಲು ಯತ್ನಿಸಿದ ಮಹಿಳೆಯನ್ನು ಅರೆಸ್ಟ್ ಮಾಡಲಾಗಿದೆ.
ಮಹಿಳೆ ಮಾನಸಿಕ ಅಸ್ವಸ್ಥಳಾಗಿದ್ದಳು ಎಂಬುದು ತಿಳಿದುಬಂದಿದೆ, ಮೊದಲು ಮಗುವಿನ ಕತ್ತು ಸೀಳಿ ನಂತರ ಶವವನ್ನು ಮನೆಗೊಳಗಿನ ಒಲೆಯ ಮೇಲೆ ಸುಡಲು ಪ್ರಯತ್ನಿಸಿದರು ಎಂದು ಮೂಲಗಳು ಹೇಳಿವೆ.
ದೇವಿ ಅವರ ಪತಿ ಕಪಿಲ್ ಕುಮಾರ್ ಅವರು ಕೆಲಸದಿಂದ ಮನೆಗೆ ಹಿಂದಿರುಗಿದಾಗ ತಮ್ಮ ಮಗ ಸತ್ತಿರುವುದನ್ನು ಕಂಡಾಗ ನಿಜಾಂಶ ತಿಳಿದುಬಂದಿದೆ. ಆಘಾತಕ್ಕೊಳಗಾದ ಕುಮಾರ್ ತಕ್ಷಣ ಕುಟುಂಬ ಸದಸ್ಯರನ್ನು ಸಹಾಯಕ್ಕಾಗಿ ಕರೆದರು. ಕುಟುಂಬ ಸದಸ್ಯರು ಬಂದಾಗ, ದೇವಿ, ಸಲಿಕೆ ಹಿಡಿದು ಅವರನ್ನು ಮತ್ತು ಕುಮಾರ್ ಅವರನ್ನು ಮನೆಯಿಂದ ಓಡಿಸಿದರು.
ಈ ಭೀಕರ ಘಟನೆಯ ಬಗ್ಗೆ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ರಾಮ್ ಅರ್ಜ್ ಮತ್ತು ಸರ್ಕಲ್ ಆಫೀಸರ್ ಚಂದ್ಪುರ ಭರತ್ ಸೋಂಕರ್ ಆಗಮಿಸಿದ ಪರಿಶೀಲಿಸಿದರು