ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ನಡ ಅನೇಕರಿಗೆ ಬೇಸರ ಮೂಡಿಸಿದ್ದ ತಪ್ಪಿತಸ್ತರಿಗೆ ತಕ್ಕ ಶಿಕ್ಷೇಯಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ದರ್ಶನ್ ಅವರ ಹಳೆಯ ಪ್ರಕರಣಗಳು ಒಂದೊಂದೆ ಬೆಳಕಿಗೆ ಬರುತ್ತಿವೆ. ಪರಿಹಾರ ಕೇಳಲು ಹೋದ ಸಂತ್ರಸ್ತರ ವಿರುದ್ಧ ದರ್ಶನ್ ಯಾವ ರೀತಿ ನಡೆದುಕೊಂಡಿದ್ದರು ಎನ್ನುವ ವಿಚಾರ ಈಗ ಬಯಲಾಗಿದೆ.
ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್ ಎಂಬುವವರು ದರ್ಶನ್ ಗೆ ಸೇರಿರುವ ಟಿ. ನರಸೀಪುರ ಸಮೀಪದ ತೂಗುದೀಪ ಫಾರ್ಮ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುವ ವೇಳೆ ಇವರಿಗೆ ಎತ್ತು ಕೊಂಬಿನಿಂದ ತಿವಿದಿತ್ತು. ಎತ್ತಿನ ಕೊಂಬು ಕಣ್ಣಿನಿಂದ ತೂರಿ ತಲೆ ಬುರುಡೆಯ ಹೊರಗೆ ಬಂದಿತ್ತು. ಇದರಿಂದ ಅವರ ಕಣ್ಣು ಹೋಗಿದೆ, ಕೋಮ ಹಂತ ತಲುಪಿದ್ದಾರೆ. ಮಹೇಶ್ ಅವರನ್ನು ದರ್ಶನ್ ಕಡೆಯವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ದುಬಾರಿ ಖರ್ಚಾಗುತ್ತದೆ ಎಂಬ ಕಾರಣಕ್ಕೆ ಮಹೇಶ್ ಅವರನ್ನು ಅವರ ಮನೆಗೆ ತಂದು ಬಿಟ್ಟು ಹೋಗಿದ್ದಾರೆ. ಆ ಬಳಿಕ ದರ್ಶನ್ ಈ ಕುಟುಂಬದ ಕಡೆ ತಿರುಗಿಯೂ ನೋಡಿಲ್ಲ. ಇಂದಿಗೂ ಮಹೇಶ್ ಅದೇ ಸ್ಥಿತಿಯಲ್ಲಿ ಜೀವನ ದೂಡುತ್ತಿದ್ದಾರೆ.
ಪರಿಹಾರ ಕೇಳಲು ಕಾರ್ಮಿಕನ ಸಂಬಂಧಿಕರು ಫಾರ್ಮ್ ಹೌಸ್ಗೆ ಹೋದರೆ ದರ್ಶನ್ ಗ್ಯಾಂಗ್ ಸದಸ್ಯರು ಸಾಕುನಾಯಿ ಛೂ ಬಿಟ್ಟಿದ್ದರಂತೆ. ಬಳಿಕ ಮೈಸೂರಿನ ಹೊಟೇಲ್ಗೆ ಮಾತುಕತೆಗೆ ಕರೆಸಿ ರೌಡಿಗಳಿಂದ ಬೆದರಿಕೆ ಹಾಕಲಾಗಿತ್ತು. ವಿಚಾರ ಹೊರಗಡೆ ಬಾಯಿಬಿಟ್ರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ದರ್ಶನ್ ಹಾಗೂ ಅವರ ಗ್ಯಾಂಗ್ ಬೆದರಿಸಿತ್ತು.ಸದ್ಯ ಮಹೇಶ್ ಕುಟುಂಬಕ್ಕೆ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ದರ್ಶನ್ಗೆ ಹಿಡಿಶಾಪ ಹಾಕುತ್ತಾ ಮಹೇಶ್ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ನಟ ದರ್ಶನ್ ಹೀರೋ ಅಲ್ಲ ವಿಲನ್ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.