ನವದೆಹಲಿ:- ಅತಿಯಾಗಿ ಪ್ರೀತಿಸ್ತಾನೆ, ಆದ್ರೆ ನನ್ನ ಜೊತೆ ಜಗಳವನ್ನೇ ಮಾಡಲ್ಲ ಎಂದು ಮಹಿಳೆಯೊಬ್ಬರು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ವಿಚ್ಛೇದನ ಕೋರಿದ ಮಹಿಳೆಗೆ ತನ್ನ ಗಂಡ ತನ್ನೊಂದಿಗೆ ಬಹಳ ಮಾತಾಡಬೇಕು, ವಾದ ಮಾಡಬೇಕು, ಜಗಳವಾಡಬೇಕು ಎಂಬ ಆಸೆಯಿತ್ತಂತೆ.
ಆದರೆ, ಆಕೆಯ ಗಂಡ ಆಕೆ ಏನೇ ಹೇಳಿದರೂ ಕೋಪಿಸಿಕೊಳ್ಳುತ್ತಿರಲಿಲ್ಲ. ಒಂದೇ ಒಂದು ದಿನವೂ ಆಕೆಯೊಂದಿಗೆ ಜಗಳವಾಡಲಿಲ್ಲ. ಇದರಿಂದ ಬೇಸತ್ತ ಆ ಮಹಿಳೆ ತನ್ನ ಗಂಡನ ಪ್ರೀತಿ ತನಗೆ ಉಸಿರುಗಟ್ಟಿಸುತ್ತಿದೆ ಎಂಬ ಕಾರಣಕ್ಕೆ ವಿಚ್ಛೇದನ ಕೋರಿದ್ದಾರೆ.
ನನ್ನ ಗಂಡ ವಿಪರೀತ ಒಳ್ಳೆಯವನು. ಅವನೇ ನನಗಾಗಿ ಅಡುಗೆ ಮಾಡುತ್ತಾನೆ. ಮನೆಯ ಎಲ್ಲ ಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾನೆ. ನನಗೆ ಸ್ವಲ್ಪವೂ ತೊಂದರೆಯಾಗಲು ಬಿಡುವುದಿಲ್ಲ. ವಿಪರೀತ ಕಾಳಜಿ ವಹಿಸುತ್ತಾನೆ. ಇದೇ ನನಗೆ ಉಸಿರುಗಟ್ಟಿಸುತ್ತಿದೆ. ನಾವು ಬೇರೆ ದಂಪತಿಯಂತೆ ನಾರ್ಮಲ್ ಆಗಿಲ್ಲ ಎನಿಸುತ್ತಿದೆ. ನನ್ನ ಗಂಡ ಪ್ರತಿಯೊಂದು ವಿಚಾರದಲ್ಲೂ ನನ್ನೊಂದಿಗೆ ಕಾಂಪ್ರಮೈಸ್ ಆಗುವುದು ನನಗೆ ಇಷ್ಟವಾಗುವುದಿಲ್ಲ” ಎಂದು ಆ ಮಹಿಳೆ ಕೋರ್ಟ್ನಲ್ಲಿ ಹೇಳಿದ್ದಾರೆ.
ನಾನು ತಪ್ಪು ಮಾಡಿದಾಗ ಅವನು ಯಾವಾಗಲೂ ನನ್ನನ್ನು ಕ್ಷಮಿಸುತ್ತಾನೆ. ಅವನೇ ಗಿಫ್ಟ್ ತಂದುಕೊಟ್ಟು ಸಮಾಧಾನ ಮಾಡುತ್ತಾನೆ. ನಾನು ಅವನೊಂದಿಗೆ ವಾದ ಮಾಡಲು ಬಯಸಿದ್ದೆ. ಆದರೆ, ಆತ ಒಂದೇ ಒಂದು ದಿನವೂ ನನ್ನೊಂದಿಗೆ ವಾದ ಮಾಡಲಿಲ್ಲ, ಜಗಳವಂತೂ ಆಡಲೇ ಇಲ್ಲ” ಎಂದು ಆಕೆ ಉಲ್ಲೇಖಿಸಿದ್ದಾರೆ.
ಆಕೆಯ ಪತಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ. “ನಾನು ಪರಿಪೂರ್ಣ ಮತ್ತು ಉತ್ತಮ ಪತಿಯಾಗಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.