ಕೊಯಮತ್ತೂರು: ತುರ್ತು ಪರಿಸ್ಥಿತಿಯನ್ನು ವಿರೋಧಿಸಬೇಡಿ ಎಂದು ಇಂದಿರಾ ಗಾಂಧಿ ಅವರು ಡಿಎಂಕೆಗೆ ಸೂಚಿಸಿದ್ದರು. ಆದರೆ ಅಂದಿನ ಮುಖ್ಯಮಂತ್ರಿ ದಿವಂಗತ ಎಂ ಕರುಣಾನಿಧಿ ಅವರು ಪ್ರಜಾಪ್ರಭುತ್ವ ಉಳಿಸುವುದಕ್ಕಾಗಿ ಅದನ್ನು ವಿರೋಧಿಸಿ ತಮ್ಮ ಸರ್ಕಾರ ಕಳೆದುಕೊಂಡರು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಹೇಳಿದ್ದಾರೆ.
ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ಟಾಲಿನ್, 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ವಿರೋಧಿಸಬಾರದು ಎಂದಿದ್ದ ಇಂದಿರಾ ಗಾಂಧಿ, ತಮ್ಮ ಮನವಿಗೆ ಕಿವಿಗೊಡದಿದ್ದರೆ ಡಿಎಂಕೆ ಸರ್ಕಾರ ವಜಾಗೊಳಿಸುವುದಾಗಿ ಕರುಣಾನಿಧಿ ಅವರಿಗೆ ಎಚ್ಚರಿಕೆ ನೀಡಿದ್ದರು ಎಂದು ಸ್ಟಾಲಿನ್ ಹೇಳಿದ್ದಾರೆ
“ಇಂದಿರಾ ಗಾಂಧಿ ಅವರು ಬಿಕ್ಕಟ್ಟಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು” ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದರು. ಅದರ ನಂತರ ಹಲವಾರು ವ್ಯಕ್ತಿಗಳನ್ನು ಬಂಧಿಸಲಾಯಿತು. “ನಾವು ಆಗ ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿದ್ದೆವು. ಆ ಸಮಯದಲ್ಲಿ, ಕರುಣಾನಿಧಿ ಅವರಿಗೆ ದೆಹಲಿಯಿಂದ ಒಂದು ಸಂದೇಶ ಬಂದಿತ್ತು. ಮೇಡಂ ಇಂದಿರಾ ಗಾಂಧಿ ಅವರು ನಿಯೋಜಿಸಿದ ಸಂದೇಶವಾಹಕರು, ನೀವು ತುರ್ತು ಪರಿಸ್ಥಿತಿಯನ್ನು ವಿರೋಧಿಸಬಾರದು ಮತ್ತು ವಿರೋಧಿಸಿದರೆ ಡಿಎಂಕೆ ಸರ್ಕಾರ ಪತನವಾಗಲಿದೆ ಎಂದರು ಎಚ್ಚರಿಕೆ ನೀಡಿದ್ದರು ಎಂದರು.