ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನ್ಯೂಜಿಲೆಂ ಡ್ ವಿರುದ್ಧ ನಡೆದಿದ್ದ ಪಂದ್ಯಕ್ಕೂ ಮುನ್ನ ಕ್ರಿಸ್ ಗೇಲ್ ದಾಖಲೆ ಮುರಿಯಲು ಪೂರನ್ಗೆ 3 ರನ್ ಅವಶ್ಯಕತೆ ಇತ್ತು. ಆದರೆ ಟ್ರೆಂಡ್ ಬೌಲ್ಟ್ ಓವರ್ನಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ ಪೂರನ್, ವೆಸ್ಟ್ ಇಂಡೀಸ್ ಪರ ಚುಟುಕು ಕ್ರಿಕೆಟ್ನಲ್ಲಿ 1900 ರನ್ ಗಳಿಸಿದ ಮೊದಲ ಆಟಗಾರ ಎಂಬ ಮೈಲುಗಲ್ಲು ನಿರ್ಮಿಸಿದರು.
ಪಂದ್ಯದ ಆರಂಭದ ಎಸೆತದಿಂದಲೂ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ನಿಕೋಲಸ್ ಪೂರನ್ 3 ಬೌಂಡರಿ ಸಹಿತ 12 ಎಸೆತಗಳಲ್ಲಿ 17 ರನ್ ಗಳಿಸಿದ್ದಾಗ ಅನುಭವಿ ವೇಗಿ ಟಿಮ್ ಸೋಥಿ ಓವರ್ನಲ್ಲಿ ವಿಕೆಟ್ ಕೀಪರ್ ಡೆವೋನ್ ಕಾನ್ವೆಗೆ ಕ್ಯಾಚ್ ನೀಡಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. 91 ಟಿ20ಐ ಪಂದ್ಯಗಳನ್ನಾಡಿರುವ ಪೂರನ್, 131 ಬೌಂಡರಿ ಹಾಗೂ 120 ಸಿಕ್ಸರ್ ಸಹಿತ 1914 ರನ್ ಗಳಿಸಿದ್ದರೆ,
ವೆಸ್ಟ್ ಇಂಡೀಸ್ಗೆ ತಮ್ಮ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಎರಡು ಬಾರಿ ಟಿ20 ವಿಶ್ವಕಪ್ ಮುಕುಟ ಗೆದ್ದುಕೊಟ್ಟಿರುವ ಸ್ವಘೋಷಿತ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, 137.50ರ ಸ್ಟ್ರೆಕ್ ರೇಟ್ನಲ್ಲಿ 1899 ರನ್ ಬಾರಿಸಿದ್ದಾರೆ. 158 ಬೌಂಡರಿ ಹಾಗೂ 124 ಸಿಕ್ಸರ್ ಸಿಡಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯ 26ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ನ ಎಡಗೈ ಸ್ಫೋಟಕ ಆಟಗಾರ ನಿಕೋಲಸ್ ಪೂರನ್ 17 ರನ್ಗಳಿಗೆ ವಿಕೆಟ್ ಒಪ್ಪಿಸಿದರೂ ಕೆರಿಬಿಯನ್ ತಂಡದ ಪರ ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ಪರ ಟಿ20ಐ ಕ್ರಿಕೆಟ್ನಲ್ಲಿ 1900 ರನ್ ಗಡಿ ದಾಟಿದ ಮೊದಲ ಆಟಗಾರರಾಗುವ ಮೂಲಕ ಸ್ವಘೋಷಿತ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.