ಟರೂಬದಲ್ಲಿರುವ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಪುವಾ ನ್ಯೂ ಗಿನಿಯಾ ತಂಡ ಫಜಲ್ಹಕ್ ಫಾರೂಕಿ ಮತ್ತು ನವೀನ್ ಉಲ್ ಹಕ್ ಅವರ ಘಾತಕ ದಾಳಿಗೆ ನಲುಗಿ 95 ರನ್ಗೆ ಸರ್ವಪತನ ಕಂಡಿತು.
ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಅಫಘಾನಿಸ್ತಾನ 15.1 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 101 ರನ್ ಬಾರಿಸಿ ಗೆಲುವು ದಾಖಲಿಸಿತು. ಅತ್ತ ಏಕದಿನ ಸೇರಿದಂತೆ ಕಳೆದ ಆರೂ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ನ್ಯೂಜಿಲ್ಯಾಂಡ್ ಈ ಬಾರಿ ಲೀಗ್ನಿಂದಲೇ ಹೊರಬಿದ್ದ ಅವಮಾನಕ್ಕೆ ಸಿಲುಕಿತು.
ಚೇಸಿಂಗ್ ವೇಳೆ ಆಫ್ಘಾನ್ ಕೂಡ ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾದ ಇಬ್ರಾಹಿಂ ಜದ್ರಾನ್(0) ಮತ್ತು ರಹಮಾನುಲ್ಲಾ ಗುರ್ಬಾಜ್(11) ವಿಕೆಟ್ ಬೇಗನೆ ಕಳೆದುಕೊಂಡಿತು. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಗುಲ್ಬದಿನ್ ನೈಬ್ ಅಜೇಯ 49 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೇವಲ ಒಂದು ರನ್ ಹಿನ್ನಡೆಯಲ್ಲಿ ಅರ್ಧಶತಕ ಬಾರಿಸುವ ಅವಕಾಶ ಕಳೆದುಕೊಂಡರು
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಪಪುವಾ ನ್ಯೂ ಗಿನಿಯಾ ಪರ ಕಿಪ್ಲಿನ್ ಡೋರಿಗಾ(27) ಹೊರತು ಪಡಿಸಿ ಉಳಿದೆಲ್ಲರು ನಿರೀಕ್ಷಿತ ಬ್ಯಾಟಿಂಗ್ನಡೆಸುವಲ್ಲಿ ವಿಫಲರಾದರು. ಡೋರಿಗಾ ಅವರ ಸಣ್ಣ ಮಟ್ಟಿನ ಬ್ಯಾಟಿಂಗ್ ಹೋರಾಟದಿಂದ ತಂಡದ ಮೊತ್ತ ಕನಿಷ್ಠ 100 ಸನಿಹಕ್ಕೆ ಬಂದಿತು. ಕಳೆದ 2 ಪಂದ್ಯಗಳಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿದ್ದ ಫಜಲ್ಹಕ್ ಫಾರೂಕಿ ಅವರ ಘಾತಕ ಬೌಲಿಂಗ್ ದಾಳಿ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಈ ಪಂದ್ಯದಲ್ಲಿ 4 ಓವರ್ ಎಸೆದು ಕೇವಲ 16 ರನ್ ವೆಚ್ಚದಲ್ಲಿ 3 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಉಳಿದಂತೆ ನವೀನ್ ಉಲ್ ಹಕ್ 4 ರನ್ಗೆ 2 ವಿಕೆಟ್ ಪಡೆದರು