ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪ್ರೇಮ ಜೀವನ ಮದುವೆಗೂ ಮುನ್ನ ಸುದ್ದಿಯಾಗಿತ್ತು. ಅನುಷ್ಕಾ ಶರ್ಮಾ ಅವರೊಂದಿಗಿನ ಮದುವೆಗೂ ಮೊದಲು, ಕೆಲ ನಟಿಯರ ಜೊತೆ ವಿರಾಟ್ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಹೌದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮದುವೆಯಾಗುವ ಮೊದಲು ಹಲವು ಮಹಿಳೆಯರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂಬ ವಂದತಿಗಳಿವೆ.
ಸಂಜನಾ ಗಲ್ರಾನಿಯಿಂದ ತಮನ್ನಾವರೆಗೆ ಕೆಲವರು ವಿರಾಟ್ ಕೊಹ್ಲಿಯ ರೂಮರ್ಡ್ ಗರ್ಲ್ಫ್ರೆಂಡ್ಸ್ ಪಟ್ಟಿಯಲ್ಲಿದ್ದಾರೆ.
ಸಂಜನಾ ಗಲ್ರಾನಿ:
ದಕ್ಷಿಣ ಭಾರತದ ನಟಿ ಸಂಜನಾ ಗಲ್ರಾನಿ ವಿರಾಟ್ ಕೊಹ್ಲಿಯೊಂದಿಗೆ ಸ್ವಲ್ಪ ಸಮಯ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ವಿರಾಟ್ ಮತ್ತು ಸಂಜನಾ ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನಂತರ ಅವರಿಬ್ಬರೂ ಕೇವಲ ಸ್ನೇಹಿತರು ಮತ್ತು ಅವರ ನಡುವೆ ಇನ್ನೇನೂ ಇಲ್ಲ ಎಂದು ಸಂಜನಾ ಹೇಳಿದರು.
ಸಾಕ್ಷಿ ಅಗರ್ವಾಲ್:
ಕಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದ ನಟಿ ಸಾಕ್ಷಿ ಅಗರ್ವಾಲ್ ವಿರಾಟ್ ಕೊಹ್ಲಿಯೊಂದಿಗೆ ಸಂಬಂಧ ಹೊಂದಿದ್ದ ಮೊದಲ ಗರ್ಲ್ಫ್ರೆಂಡ್ ಎಂದು ವರದಿಯಾಗಿದೆ. ಸಾಕ್ಷಿ ಕನ್ನಡ ಚಲನಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಆದರೆ ವಿರಾಟ್ ಮತ್ತು ಸಾಕ್ಷಿ ಅವರ ಬಾಂಧವ್ಯ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಕ್ರಿಕೆಟ್ ವೃತ್ತಿಜೀವನದ ಆರಂಭದ
ವರ್ಷಗಳಲ್ಲಿ ಕೊನೆಗೊಂಡಿತು ಎಂದು ಹೇಳಲಾಗಿದೆ.
ಸಾರಾ ಜೇನ್ ಡಯಾಸ್:
ಮಾಡೆಲ್ ಜೇನ್ ಡಯಾಸ್ ಕೊಹ್ಲಿಯ ಎರಡನೇ ಗರ್ಲ್ಫ್ರೆಂಡ್ ಎಂದು ವರದಿಯಾಗಿದೆ. ಫೆಮಿನಾ ಮಿಸ್ ಇಂಡಿಯಾ 2007 ರ ವಿನ್ನರ್ ಸಾರಾ ಜೇನ್ ಡಯಾಸ್ ಮತ್ತು ವಿರಾಟ್ ಪಾರ್ಟಿಯಲ್ಲಿ ಭೇಟಿಯಾದರು. ವರದಿಯ ಪ್ರಕಾರ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2011ರ ವಿಶ್ವಕಪ್ ಫೈನಲಿನಲ್ಲಿ ಚಿಯರ್ ಮಾಡಲು ಅವರು ಸಾರಾ ಅವರನ್ನು ಆಹ್ವಾನಿಸಿದರು. ಆದರೆ ಸಾರಾ ತಮ್ಮ ಕೆಲಸದ ಕಾರಣದಿಂದ ಬರಲು ಸಾಧ್ಯವಾಗಲಿಲ್ಲ. ಆದಾಗ್ಯೂ,ಈ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ವಿರಾಟ್ ಜುಲೈ 2011 ರಲ್ಲಿ ವೆಸ್ಟ್ ಇಂಡೀಸ್ಗೆ ಹಾರಿದಾಗ ಕೊನೆಗೊಂಡಿತು.
ತಮನ್ನಾ ಭಾಟಿಯಾ:
ವಿರಾಟ್ ಮತ್ತು ತಮನ್ನಾ ಮೊದಲ ಬಾರಿಗೆ ಆಡ್ ಶೂಟಿಂಗ್ನಲ್ಲಿ ಭೇಟಿಯಾದರು. ಶೂಟಿಂಗ್ ನಂತರ ಇವರ ನಡುವೆ ಪ್ರೀತಿ ಹುಟ್ಟಿಕೊಂಡಿತು ಎಂದು ವರದಿಯಾಗಿದೆ. ಈ ಕಪಲ್ 2012ರಲ್ಲಿ ಒಂದು ವರ್ಷ ಡೇಟಿಂಗ್ ಮಾಡಿದ್ದರು ಆದರೆ ಅವರ ಸಂಬಂಧವನ್ನು ಎಂದಿಗೂ ಬಹಿರಂಗಪಡಿಸಲಿಲ್ಲ. ವಿರಾಟ್ ಮತ್ತು ಇಜಾಬೆಲ್ಲೆ ಲೈಟ್ ಅವರ ಭೇಟಿ ತಮನ್ನಾ ಜೊತೆಯ ಬ್ರೇಕಪ್ ಹಿಂದಿನ ಕಾರಣವೆಂದು ಹೇಳಲಾಗಿದೆ.
ಇಜಾಬೆಲ್ಲೆ ಲೈಟ್:
ಬಾಲಿವುಡ್ ಪ್ರವೇಶಿಸಲು ಬಯಸಿದ ಬ್ರೆಜಿಲಿಯನ್ ಮಾಡೆಲ್ ಕಮ್ ನಟಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ಭಾರತಕ್ಕೆ ಬಂದರು. ಇಜಾಬೆಲ್ಲೆ ಕೆಲವು
ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದರು ಮತ್ತು ಅದೇ ಸಮಯದಲ್ಲಿ ವಿರಾಟ್ ಕೊಹ್ಲಿ ಜೊತೆ ಸಂಪರ್ಕ ಹೊಂದಿದರು. ಇಬ್ಬರೂ ಪಾರ್ಟಿಯಲ್ಲಿ ಭೇಟಿಯಾದರು ಮತ್ತು ಹತ್ತಿರವಾಗಲು ಪ್ರಾರಂಭಿಸಿದರು ಎಂದು ಹೇಳಲಾಗಿದೆ. ಹಿಂದಿನ ವರದಿಗಳ ಪ್ರಕಾರ, ಇಜಾಬೆಲ್ಲೆ ಮತ್ತು ವಿರಾಟ್ ಸಿಂಗಾಪುರದಲ್ಲಿ ಡೇಟಿಂಗ್ ಮಾಡುವುದನ್ನು ಕೂಡ ನೋಡಲಾಯಿತು. ಎರಡು ವರ್ಷಗಳ ನಂತರ, 2013 ರಲ್ಲಿ, ಅವರು ತಮ್ಮ ಸಂಬಂಧವನ್ನು ಥಟ್ಟನೆ ಕೊನೆಗೊಳಿಸಿದರು ಎಂದು ಹೇಳಲಾಗಿದೆ.
ಅನುಷ್ಕಾ ಶರ್ಮಾ:
ಬಾಲಿವುಡ್ ನಟಿ ಅನುಷ್ಕಾ ಶರ್ಮ ಮತ್ತು ವಿರಾಟ್ ಮೊದಲ ಬಾರಿಗೆ 2013 ರಲ್ಲಿ ‘ಹೆಡ್ ಮತ್ತು ಶೋಲ್ಡರ್ಸ್’ ಕಮರ್ಷಿಯಲ್ ಸೆಟ್ನಲ್ಲಿ ಭೇಟಿಯಾದರು. ಈ ಜೋಡಿ 4.5 ವರ್ಷಗಳಿಗಿಂತ ಹೆಚ್ಚು ಕಾಲ ಡೇಟಿಂಗ್ ಮಾಡಿತು, ನಂತರ 2017 ರಲ್ಲಿ ಇಟಲಿಯಲ್ಲಿ ವಿವಾಹವಾದರು.