ನ್ಯೂಯಾರ್ಕ್: 2024ರ ಟಿ20 ವಿಶ್ವಕಪ್ಗಾಗಿ ಕೇವಲ 5 ತಿಂಗಳಲ್ಲಿ ನಿರ್ಮಿಸಲಾಗಿದ್ದ ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರೀಡಾಂಗಣವನ್ನು ಟೂರ್ನಿಯ ಬಳಿಕ ನೆಲಸಮಗೊಳಿಸಲು ಆಯೋಜಕರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಕ್ರೀಡಾಂಗಣವನ್ನು 40 ಎಕರೆ ಭೂ ಪ್ರದೇಶದಲ್ಲಿ 30 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 250 ಕೋಟಿ ರೂ.) ವೆಚ್ಚದಲ್ಲಿ ನಿರ್ಮಿಸಲಾಗಿತ್ತು.
ಕೇವಲ 4 ತಿಂಗಳಲ್ಲೇ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದ್ದು, 35 ಸಾವಿರ ಆಸನ ಸಾಮರ್ಥ್ಯ ಹೊಂದಿದೆ.
ಭಾರತ – ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ಸೇರಿದಂತೆ ಟೂರ್ನಿಯ ಒಟ್ಟು 8 ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಬುಧವಾರ ಭಾರತ-ಅಮೆರಿಕ (Ind vs USA) ಪಂದ್ಯ ಇಲ್ಲಿ ನಡೆದ ಕೊನೆಯ ಲೀಗ್ ಸುತ್ತಿನ ಪಂದ್ಯ ಎಂದು ಹೇಳಲಾಗುತ್ತಿದೆ. ಈ ಕ್ರೀಡಾಂಗಣಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾದ ಡ್ರಾಪ್ ಇನ್ ಪಿಚ್ಗಳನ್ನು ಅಳವಡಿಸಲಾಗಿತ್ತು ಎಂದು ತಜ್ಞರು ಹೇಳಿದ್ದಾರೆ.
ಈಗಾಗಲೇ 8 ಲೀಗ್ ಪಂದ್ಯಗಳು ಕೌಂಟಿ ಸ್ಟೇಡಿಯಂನಲ್ಲಿ ನಡೆದಿದ್ದು, ಜೂನ್ 14ರಂದೇ ಕ್ರೀಡಾಂಗಣ ಧ್ವಂಸಗೊಳಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಹತ್ತಾರು ಬುಲ್ಡೋಜರ್ಗಳನ್ನು ಕ್ರೀಡಾಂಗಣದ ಹೊರಗೆ ನಿಲ್ಲಿಸಲಾಗಿದೆ. ಈ ಕುರಿತ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕ್ರೀಡಾಂಗಣದ ಮಾಡ್ಯುಲರ್ ಘಟಕಗಳನ್ನು ಕಿತ್ತುಹಾಕಿ ಮರುಬಳಕೆ ಮಾಡಲಾಗುತ್ತದೆ, ಸ್ಥಳೀಯ ಕ್ರಿಕೆಟ್ ಕ್ಲಬ್ಗಳು ಮತ್ತು ಅಭಿಮಾನಿಗಳು ಉನ್ನತ-ಶ್ರೇಣಿಯ ಟರ್ಫ್ ಮತ್ತು ಮೂಲಸೌಕರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.