ವಾಷಿಂಗ್ಟನ್: ಸ್ವೀಸ್ ಬ್ಯಾಂಕ್ ನಷ್ಟದ ಬೆನ್ನಲ್ಲೇ ಸ್ಟಾರ್ಟ್ಅಪ್ಗಳಿಗೆ ಸಾಲ ನೀಡಲು ಹೆಸರುವಾಸಿಯಾದ ಅಮೆರಿಕಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ ತನ್ನ ವ್ಯವಹಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ.
ಟೆಕ್ ಸ್ಪಾರ್ಟ್ ಅಪ್ಗಳಿಗೆ ಮೂಲ ಕಂಪನಿಯಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ನ ಠೇವಣಿದಾರರು ಹಾಗೂ ಹೂಡಿಕೆದಾರರು ಬರೋಬ್ಬರಿ 282 ಲಕ್ಷ ಕೋಟಿ ರೂ. ಬೃಹತ್ ಮೊತ್ತದ ಹಣವನ್ನು ಹಿಂಪಡೆದ ಪರಿಣಾಮ ಬ್ಯಾಂಕ್ನ ನಗದು ವ್ಯವಹಾರದಲ್ಲಿ ಕೊರತೆ ಕಂಡುಬಂದಿತ್ತು. ಈ ಕಾರಣದಿಂದಾಗಿ ಬ್ಯಾಂಕ್ ವ್ಯವಹಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ತಿಳಿಸಿದೆ.
ಶುಕ್ರವಾರ ಕ್ಯಾಲಿಫೋರ್ನಿಯಾ ಬ್ಯಾಂಕಿಂಗ್ ಅಧಿಕಾರಿಗಳು ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಮುಚ್ಚಿದ್ದಾರೆ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಇದು ಅತಿದೊಡ್ಡ ಬ್ಯಾಂಕಿಂಗ್ನ ವೈಫಲ್ಯವಾಗಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಕಂಪನಿಗಳಿಗೆ ಹಾಗೂ ವೆಂಚರ್ ಕ್ಯಾಪಿಟಲಿಸ್ಟ್ ಹೊಂದಿರುವ ಕಂಪನಿಗಳಿಗೆ ಈ ಬ್ಯಾಂಕ್ ಬೆಂಬಲ ನೀಡುತ್ತ ಬಂದಿತ್ತು. ಅದಲ್ಲದೆ, ಪ್ರಸ್ತುತ ಉದ್ಯಮದ ಪ್ರತಿಷ್ಠಿತ ಬ್ರ್ಯಾಂಡ್ ಆಗಿರುವ ಕಂಪನಿಯನ್ನೂ ಸಿಲಿಕಾನ್ ವ್ಯಾಲಿ ಬ್ಯಾಂಕ್ ಬೆಂಬಲಿಸಿತ್ತು.
ಎಸ್ ವಿ ಬಿ ಮಾತೃ ಸಂಸ್ಥೆಯಾದ ಎಸ್ ವಿ ಬಿ ಫೈನಾನ್ಸಿಯಲ್ ಗ್ರೂಪ್, ತನ್ನ ಭಾಗವಾಗಿರುವ 21 ಬಿಲಿಯನ್ ಡಾಲರ್ನಷ್ಟು ಮೌಲ್ಯದ ಬಾಂಡ್ಸ್ ಮತ್ತು ಡಿಬೆಂಚರ್ಸ್ ಅನ್ನು ಮಾರಾಟ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಹೂಡಿಕೆದಾರರು ಮತ್ತು ಠೇವಣಿದಾರರಲ್ಲಿ ಆತಂಕ ಹುಟ್ಟಿಸಲು ಕಾರಣವಾಗಿತ್ತು. ಇದರ ಮುಂದುವರಿದ ಭಾಗವಾಗಿ ಸಿಲಿಕಾನ್ ವ್ಯಾಲಿ ಬ್ಯಾಂಕ್ನ ಗ್ರಾಹಕರು ಭಾರೀ ಪ್ರಮಾಣದ ಠೇವಣಿ ಹಿಂಪಡೆದಿದ್ದು, ಸ್ಟಾರ್ಟ್ಅಪ್ ಇಂಡಸ್ಟ್ರಿ ಮೇಲೆ ದೊಡ್ಡ ಹೊಡೆತ ಬಿದ್ದಿದೆ.
ಇದರಿಂದಾಗಿ ಸಿಲಿಕಾನ್ ವ್ಯಾಲಿ ಬ್ಯಾಂಕ್ನಲ್ಲಿ ಆರ್ಥಿಕ ಕುಸಿತ ಉಂಟಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಎಸ್ವಿಬಿ ಷೇರು ಮೌಲ್ಯ ಕುಸಿತ ಕಂಡಿತ್ತು. ಇದರ ಪರಿಣಾಮವಾಗಿ 80 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚಿಸಲಾಗಿದೆ.