ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ದರ್ಶನ್ ಎಂಡ್ ಗ್ಯಾಂಗ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಬಳಿಕ ಶವವನ್ನು ಸಾಗಿಸಲು ಹಾಗೂ ತನ್ನ ಹೆಸರು ಹೇಳದಿರಲು ನಟ ದರ್ಶನ್ 30 ಲಕ್ಷ ರೂ ಹಣ ನೀಡಿದ್ದರು. ಇದೀಗ ಆ ಹಣವನ್ನು ಪೊಲೀಸರು ಸೀಸ್ ಮಾಡಿದ್ದಾರೆ.
ದರ್ಶನ್ ಆಪ್ತ ಬಂಧನಕ್ಕೆ ಒಳಗಾಗಿರುವ ಪ್ರದೋಷ್ ಮೂಲಕ ಆರೋಪಿಗಳಿಗೆ ತಲಾ 5 ಲಕ್ಷದಂತೆ ಮೂವತ್ತು ಲಕ್ಷ ನೀಡಿದ್ದರು. ಅದರನ್ನು ಪ್ರದೋಷ್ ಆಪ್ತರೊಬ್ಬರ ಮನೆಯಲ್ಲಿ ಇಟ್ಟಿದ್ದರು. ಇದೀಗ ಪೊಲೀಸರು ಮನೆಗೆ ಮೇಲೆ ದಾಳಿ ನಡೆಸಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ನಟ ಕೊಟ್ಟಿದ್ದ 30 ಲಕ್ಷ ಹಣವನ್ನು ಆಪ್ತನೊಬ್ಬನ ಮನೆಯಲ್ಲಿ ಇಡಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಹಣದ ಬಗ್ಗೆ ಬಾಯಿಬಿಟ್ಟಿದ್ದಾರೆ. ನಂತರ ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಮೃತದೇಹ ಯಾರಿಗೂ ಸಿಗದಂತೆ ಸಾಗಿಸಲು ಮೂವರು ಆರೋಪಿಗಳಿಗೆ ಮುಂಗಡವಾಗಿ ಒಟ್ಟು 5 ಲಕ್ಷ ಸಂದಾಯ ಮಾಡಲಾಗಿತ್ತು. ಉಳಿದ ಇಬ್ಬರು ಆರೋಪಿಗಳು ಜೈಲಿಗೆ ಹೋದ ಮೇಲೆ ಅವರ ಮನೆಯವರಿಗೆ ಹಣ ತಲುಪಿಸುವುದಾಗಿ ಹೇಳಲಾಗಿತ್ತು. ಈ ವಿಚಾರವನ್ನು ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.