ಬ್ಯೂನಸ್ ಐರಿಸ್: ಇತ್ತೀಚೆಗೆ ಮಹಿಳೆಯರು ತನ್ನನ್ನು ತಾನೇ ಮದುವೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಅರ್ಜೇಂಟಿನಾದಲ್ಲಿ ಮಹಿಳೆಯೊಬ್ಬಳು ತನ್ನನ್ನೇ ತಾನು ಮದುವೆಯಾಗಿ ಮದುವೆಯಾದ 24 ಗಂಟೆಯೊಳಗೆ ವಿಚ್ಛೇದನ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.
ಸೋಫಿ ಮೌರ್ (25) ತನ್ನನ್ನು ತಾನು ಮದುವೆಯಾದ ಮಹಿಳೆ. ಈಕೆ ಈ ಬಗ್ಗೆ ಟ್ವೀಟ್ ಮಾಡಿ, ವಧುವಿನ ಡ್ರೇಸ್ನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಳು.
ಇಂದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ. ನಾನು ಮದುವೆಯ ಉಡುಪನ್ನು ಖರೀದಿಸಿದೆ. ಅಷ್ಟೇ ಅಲ್ಲದೇ ನನ್ನನ್ನು ಮದುವೆಯಾಗಲು ಕೇಕ್ ಅನ್ನು ಖರೀದಿಸಿದ್ದೇನೆ ಎಂದು ಬರೆದುಕೊಂಡಿದ್ದಾಳೆ.
ಈ ಟ್ವೀಟ್ಗೆ ಅನೇಕರು ಸಕಾರತ್ಮಕವಾಗಿ ಹಾಗೂ ನಕಾರಾತ್ಮಕವಾಗಿ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ ಈ ಬಗ್ಗೆ ಚರ್ಚೆಯೂ ಆಗಿತ್ತು. ಆದರೆ ವಿಚಿತ್ರ ಎನ್ನುವಂತೆ ಮದುವೆ ಆದ ಕೇವಲ ಒಂದು ದಿನದ ನಂತರ ವಿಚ್ಛೇದನ ಪಡೆದುಕೊಳ್ಳುತ್ತಿದ್ದೇನೆ ಎಂದು ಪುನಃ ಟ್ವೀಟ್ ಮಾಡಿದ್ದಾಳೆ.
ನಾನು ನನ್ನೊಂದಿಗೆ ಮದುವೆಯಾಗಿ ಒಂದು ದಿನವಾಗಿದೆ. ಈ ನಿರ್ಧಾರವನ್ನು ಮುದುವರಿಸಲು ಸಾಧ್ಯವಿಲ್ಲ. ಹೀಗಾಗಿ ವಿಚ್ಛೇದನ ಪಡೆದುಕೊಳ್ಳಲು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾಳೆ.