“ನನ್ನ ತಮ್ಮ ಅರೆಸ್ಟ್ ಆದ ಸುದ್ದಿ ಕೇಳಿ ತಂದೆ ಸಾಕಷ್ಟು ಚಿಂತೆಯಲ್ಲಿದ್ದು. ಅವನನ್ನು ಬಿಡಿಸಿಕೊಂಡು ಬನ್ನಿ ಎಂದು ಸಾಕಷ್ಟು ಗೋಳಾಡಿದ್ದರು, ಅದೇ ಚಿಂತೆಯಲ್ಲಿ ಕೊನೆಯುಸಿರೆಳೆದರು. ನಿಜಕ್ಕೂ ನನ್ನ ನನ್ನ ತಮ್ಮ ಯಾವುದೇ ತಪ್ಪು ಮಾಡಿಲ್ಲ, ಬಡವರ ಮಕ್ಕಳೆಂದು ಅವನನ್ನ ಪ್ರಕರಣದಲ್ಲಿ ಸಿಲುಕಿಸಿದ್ದಾರೆ…” ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಂಧನಕೊಳಗಾಗಿರುವ ಅನು ಅಲಿಯಾಸ್ ಅನಿಲ್ ಸಹೋದರಿ ಕಣ್ಣೀರಿಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ತಮ್ಮ ಅರೆಸ್ಟ್ ಆದ ಸುದ್ದಿ ಕೇಳಿ ನನ್ನ ತಂದೆ ಕಣೀರಿಟ್ಟಿದ್ದರು. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಅವನನ್ನು ಬಿಡಿಸಿಕೊಂಡು ಬನ್ನಿ ಎಂದು ಗೋಳಾಡಿದ್ದರು. ಅದೇ ಚಿಂತೆಯಲ್ಲಿ ಮಲಗಿದವರು ಕೊನೆಯುಸಿರೆಳೆದಿದ್ದಾರೆ. ನನ್ನ ತಮ್ಮ ಯಾವುದೇ ತಪ್ಪು ಮಾಡಿಲ್ಲ. ಅವನು ನನ್ನ ಬಳಿ ಯಾವುದೇ ವಿಷಯವನ್ನೂ ಮುಚ್ಚಿಟ್ಟವನಲ್ಲ. ಬಡವರ ಮಕ್ಕಳೆಂದು ನನ್ನ ತಮ್ಮನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ನೋವು ತೋಡಿಕೊಂಡರು.
ಅನು ನಮ್ಮ ಜೊತೆಯಲ್ಲಿಯೇ ಇದ್ದರೂ ಯಾವುದೇ ವಿಷಯ ಹೇಳಿಲ್ಲ. ಟಿವಿ ನೋಡಿದ ಬಳಿಕವೇ ನಮಗೂ ವಿಷಯ ತಿಳಿದಿದೆ. ದಯವಿಟ್ಟು ಅವನನ್ನು ಕರೆದುಕೊಂಡು ಬನ್ನಿ ಎಂದು ಮನವಿ ಮಾಡಿದರು.
ಚಿತ್ರದುರ್ಗ ನಗರದಲ್ಲಿದ್ದ ಎ6 ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಹಾಗೂ ಎ7 ಆರೋಪಿ ಅನು ಅಲಿಯಾಸ್ ಅನಿಲ್ ಎಂಬ ಇಬ್ಬರು ಆರೋಪಿಗಳನ್ನ ಪೊಲಿಸರು ಶುಕ್ರವಾರ ಬೆಳಗ್ಗೆ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಚಿತ್ರದುರ್ಗ ಡಿವೈಎಸ್ಪಿ ದಿನಕರ್ ನೇತೃತ್ವದಲ್ಲಿ ಆರೋಪಿಯನ್ನ ಬಂಧಿಸಲಾಗಿತ್ತು. ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.