ಬಹುತೇಕ ಹೆನ್ಣುಮಕ್ಕಳಿಗೆ ಋತುಚಕ್ರದ ಸಂದರ್ಭ ಆಗುವ ನೋವು, ಅಸಾಧ್ಯವಾದ ಮಾನಸಿಕ ತುಮುಲಗಳೂ ಕೂಡಾ ಈ ಸಮಸ್ಯೆಯ ಭಾಗವೇ ಹೌದು. ಅಷ್ಟೇ ಅಲ್ಲ, ಇನ್ನೂ ಅನೇಕರಿಗೆ ಹಾರ್ಮೋನಿನ ಸಮಸ್ಯೆ ಇತ್ಯಾದಿಗಳಿಂದ ಋತುಚಕ್ರದಲ್ಲಿ ಏರುಪೇರು ಇತ್ಯಾದಿ ಸಮಸ್ಯೆಗಳೂ ಆಗುತ್ತವೆ. ಇತ್ತೀಚೆಗಿನ ಜೀವನಕ್ರಮದ ಬದಲಾವಣೇ, ಆಹಾರಶೈಲಿ, ಒತ್ತಡ ಇತ್ಯಾದಿಗಳಿಂದಾಗಿ ಹೆಚ್ಚು ಹೆಚ್ಚು ಮಂದಿ ಪಿಸಿಒಎಸ್ ಮತ್ತಿತರ ಸಮಸ್ಯೆಗಳಿಂದಲೂ ಋತುಚಕ್ರದ ಸಮಸ್ಯೆಗಳು ಎದುರಾಗುತ್ತವೆ.
ಸರಿಯಾಗಿ ಮಾಸಿಕವಾಗಿ ಋತುಚಕ್ರ ಬರದೇ ಇರುವುದು, ಯಾವಾಗಲೋ ಇದ್ದಕ್ಕಿದ್ದಂತೆ ರಕ್ತಸ್ರಾವ ಶುರುವಾಗಿಬಿಡುವುದು, ಬಹಳ ದಿನಗಳ ಕಾಲ ರಕ್ತಸ್ರಾವ ನಿಲ್ಲದೇ ಇರುವುದು ಇತ್ಯಾದಿ ಇತ್ಯಾದಿಗಳು ಸಮಸ್ಯೆಯ ಭಾಗ. ವೈದ್ಯರ ಬಳಿ ಹೋಗುವುದು, ಸಲಹೆ, ವೈದ್ಯಕೀಯ ನೆರವು ಪಡೆಯುವುದು ಇಂಥ ಸಂದರ್ಭ ಅತ್ಯಗತ್ಯ. ಇವುಗಳ ಜೊತೆಜೊತೆಗೂ ಕೆಲವು ಜೀವನಕ್ರಮ ಬದಲಾವಣೆ, ಆಹಾರಶೈಲಿ ಬದಲಾವಣೆ ಇತ್ಯಾದಿ ಮಾಡುವುದರಿಂದ ಹಾಗೂ ಕೆಲವು ಮನೆಮದ್ದುಗಳ ಪಾಲನೆಯಿಂದಲೂ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ ಈ ಸಮಸ್ಯೆಗೆ ಕೊಂಚ ಮಟ್ಟಿನ ಪರಿಹಾರ ಪಡೆಯಬಹುದು ಎಂಬುದನ್ನು ನೋಡೋಣ
ಹಸಿರು ಬಣ್ಣದಲ್ಲಿರುವ ಪಪ್ಪಾಯಿ ತಲೆತಲೆತಲಾಂತರಗಳಿಂದ ಹೀಗೆ ಋತುಚಕ್ರದ ಏರುಪೇರಿಗೆ ಒಳ್ಳೆಯ ಮನೆಮದ್ದು ಎಂದೇ ಹೆಸರುವಾಸಿ. ಇದು ಗರ್ಭಕೋಶದ ಮಾಂಸಖಂಡಗಳನ್ನು ಆ ಸಮಯಕ್ಕೆ ತಕ್ಕ ಹಾಗೆ ಇರಬೇಕಾಂದಂತೆ ಮಾಡುವ ಗುಣವಿರುವುದರಿಂದ ರಕ್ತಸ್ರಾವಕ್ಕೆ ಸುಲಭವಾಗುತ್ತದೆ. ಹಣ್ಣಾಗದ ಪಪ್ಪಾಯಿಯನ್ನು ಮೂರ್ನಾಲ್ಕು ತಿಂಗಳುಗಳ ಕಾಲ ನಿಯಮಿತವಾಗಿ ಸೇವಿಸುತ್ತಾ ಬಂದಲ್ಲಿ, ಈ ಸಮಸ್ಯೆ ಹತೋಟಿಗೆ ಬರುತ್ತದೆ. ಮೂರ್ನಾಲ್ಕು ತಿಂಗಳುಗಳಾದರೂ ಹೀಗೆ ಮಾಡಬೇಕು. ಹಾಗೂ ಋತುಚಕ್ರದ ದಿನಗಳಲ್ಲಿ ಇವನ್ನು ಸೇವಿಸಬಾರದು
ಅರಿಶಿಣ
ಅರಿಶಿಣವು ಬಹಳ ಸಮಸ್ಯೆಗಳಿಗೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಮೂಲಿಕೆ. ಇದನ್ನು ನಿತ್ಯಜೀವನದಲ್ಲಿ ಹಲವು ಆಹಾರ ತಯಾರಿಕೆಗೆ ಬಳಸಿದರೂ ಇದನ್ನು ಔಷಧಿಯಾಗಿ ನಾವು ಸೇವಿಸುವ ಮೂಲಕವೂ ಹೆಚ್ಚಿನ ಲಾಭ ಪಡೆಯಬಹುದು. ಋತುಚಕ್ರದ ಸಮತೋಲನಕ್ಕೆ, ಹಾರ್ಮೋನಿ ಸಮಸ್ಯೆಯ ಸಮತೋಲನಕ್ಕೆ ಇತ್ಯಾದಿಗಳಿಗೆ ಅರಿಶಿನ ಒಳ್ಳೆಯ ಮದ್ದು. ಇದರಲ್ಲಿ ಉಷ್ಣಕಾರಕ ಗುಣವಿದೆ. ಆಂಟಿ ಇನ್ಫ್ಲಮೇಟರಿ ಗುಣಗಳೂ ಇವೆ. ನಿತ್ಯವೂ ಅರಿಶಿನ ಹಾಕಿದ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಕೆಲವು ವಾರಗಳಲ್ಲಿ ನೀವು ಬದಲಾವಣೆಯ ಪ್ರತಿಫಲ ಕಾಣುವಿರಿ. ಕೇವಲ ಒದೊಂದೇ ಅಲ್ಲ, ಹಲವು ಆರೋಗ್ಯ ಸಮಸ್ಯೆಗಳು ನಿಧಾನವಾಗಿ ಮಾಯವಾಗಿ ರೋಗ ನಿರೋಧಕತೆಯೂ ನಿಮ್ಮಲ್ಲಿ ಹೆಚ್ಚುತ್ತದೆ
ಹಾರ್ಮೋನಿನ ಏರುಪೇರನ್ನು ಇದು ಸಮತೋಲನಗೊಳಿಸಿ ಋತುಚಕ್ರದ ಸಮಸ್ಯೆಗಳಿಗೆ ಉತ್ತಮ ಫಲ ನೀಡುತ್ತದೆ. ಆದರೆ, ಋತುಚಕ್ರದ ಸಮಯದಲ್ಲಿ ಇದನ್ನು ಸೇವಿಸಬೇಡಿ. ಉಳಿದ ಸಮಯದಲ್ಲಿ, ಅಲೊವೆರಾ ಗಿಡದಿಂದ ಎಲೆಯನ್ನು ಕತ್ತರಿಸಿ ತೆಗೆದು ಅದರೊಳಗಿನ ಬಿಳಿ ಲೋಳೆಯನ್ನು ಮಾತ್ರ ತೆಗೆದು ಅದನ್ನು ನಿತ್ಯವೂ ಸೇವಿಸುತ್ತಾ ಬರಬಹುದು. ಬೇಕಿದ್ದರೆ ಇದನ್ನು ಜ್ಯೂಸ್ ಮಾಡಿ ನಿತ್ಯವೂ ಸೇವಿಸಬಹುದು
ಯೋಗ, ಧ್ಯಾನ
ನಿತ್ಯವೂ ಯೋಗಾಭ್ಯಾಸ ಮಾಡುವುದು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ಹಾರ್ಮೋನಿನ ಏರುಪೇರಿಗೆ ಬಹಳ ಸಾರಿ ಒತ್ತಡವೂ ಕಾರಣವಾಗಿರುತ್ತದೆ. ಧ್ಯಾನ ಹಾಗೂ ಯೋಗದಿಂದ ಒತ್ತಡವು ನಿವಾರಣೆಯಾಗಿ ಹಾರ್ಮೋನಿನ ಸಮಸ್ಯೆಯೂ ಹತೋಟಿಗೆ ಬರುತ್ತದೆ. ಅಷ್ಟೇ ಅಲ್ಲ, ಋತುಚಕ್ರದ ಸಮಸ್ಯೆಗಳಿಗಾಗಿಯೇ ಕೆಲವು ಆಸನಗಳನ್ನು ಮಾಡುವ ಮೂಲಕ ಈ ಸಮಸ್ಯೆಯನ್ನು ನಿಧಾನವಾಗಿ ಗೆದ್ದು ಆರೋಗ್ಯಕರ ಜೀವನದತ್ತ ಮುಖ ಮಾಡಬಹುದು
ಶುಂಠಿ
ಹಸಿಯಾದ ಸಣ್ಣ ತುಂಡು ಶುಂಠಿಯನ್ನು ಜಜ್ಜಿ ಅಥವಾ ತುರಿದು ನೀರಲ್ಲಿ ಹಾಕಿ ಕುದಿಸಿ. ಸುಮಾರು ಐದು ನಿಮಿಷ ಕುದಿದ ನಂತರ ಅದನ್ನು ಸೋಸಿಕೊಂಡು ದಿನಕ್ಕೆ ಮೂರು ಬಾರಿ ಊಟದ ನಂತರ ಸೇವಿಸಿ. ಹೀಗೆ ಮಾಡುವುದರಿಂದ ಋತುಚಕ್ರದ ಸಮಸ್ಯೆಗಳು ಸಾಕಷ್ಟು ಹತೋಟಿಗೆ ಬರುತ್ತದೆಎರಡು ಚಮಚ ಜೀರಿಗೆಯನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಸೋಸಿಕೊಂಡು ಆ ನೀರನ್ನು ಕುಡಿಯುವುದರಿಂದಲೂ ಹಾರ್ಮೋನಿನ ಅಸಮತೋಲನ ನಿಯಂತ್ರಣಕ್ಕೆ ಬರುತ್ತದೆ