ಅಮಾಯಕ ರೇಣುಕಾ ಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ನಟ ದರ್ಶನ ಮತ್ತು ಡಿ ಗ್ಯಾಂಗ್ ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ನಟನೆಯಲ್ಲಿ ಸೌಮ್ಯತೆ ತೋರಿಸುವ ದರ್ಶನ್ ನಿಜ ಜೀವನದಲ್ಲಿ ಒಬ್ಬ ರೌಡಿತರ ವರ್ತನೆ ಮಾಡಿ ರೇಣುಕಾ ಸ್ವಾಮಿಯನ್ನು ಕೊಂದಿದ್ದಾರೆ.
ರೇಣುಕಾ ಸ್ವಾಮಿಯ ತಂದೆ ತಾಯಿ ಧರ್ಮಪತ್ನಿ ಕಣ್ಣೀರಿನಲ್ಲಿ ಕೈ ತೊಳೆದುಕೊಳ್ಳುತ್ತಿದ್ದಾರೆ ಅವರ ಶಾಪ ಚಿತ್ರನಟ ದರ್ಶನಗೆ ತಟ್ಟುತ್ತದೆ.
ದರ್ಶನ್ ನಟನೆಯಲ್ಲಿ ಹೀರೋ ಆಗಿದ್ದರೂ ಆದರೆ ನಿಜ ಜೀವನದಲ್ಲಿ ಕೊಲೆಗಡಕರಾಗಿದ್ದಾರೆ ಇಡೀ ಸಮಾಜವೇ ತಲೆತಗ್ಗಿಸುವಂತಹ ಘಟನೆಯನ್ನು ಇವರು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲಾರದೆ ಜೀವಾವಧಿ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿದರು.ಬನಹಟ್ಟಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ನಂತರ ರಬಕವಿ ಬನಹಟ್ಟಿ ತಹಶೀಲ್ದಾರ ಕಾರ್ಯಾಲಯಕ್ಕೆ ತೆರಳಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಸ್ಟಾರ್ ಪಟ್ಟಕ್ಕೆ ಏರಿದವರು ಕಾನೂನ ಕೈಗೆ ತೆಗೆದುಕೊಳ್ಳಬಹುದೆ?
ನಾವು ಎಂತದೇ ಹೋರಾಟಕ್ಕೂ ಹಿಂಜರಿಯಲ್ಲ ಎಂದು ಹೇಳಿದರು. ಗೃಹ ಮಂತ್ರಿಗಳು ದುರಹಂಕಾರಿ ದರ್ಶನ ಮತ್ತು ಅವರ ತಂಡವನ್ನು ಉಳಿಸುವ ಪ್ರಯತ್ನ ಮಾಡಿದರೆ ನಮ್ಮ ಹೋರಾಟ ತೀವ್ರವಾಗುತ್ತದೆ ದರ್ಶನ ಅಭಿಮಾನಿ ಸಂಘವನ್ನು ವಿಸರ್ಜನೆ ಮಾಡಿ ಸಾವಿಗೆ ನ್ಯಾಯ ಕೊಡಿಸಬೇಕೆಂದು ಈಶ್ವರ ಕಾಡದೇವರ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಹೇಳಿದರು.
ಸಂಘದ ಅಧ್ಯಕ್ಷರು ಹೇಳಿದರು.
ಇದೇ ಸಂದರ್ಭದಲ್ಲಿ ಬಸಯ್ಯ ಹಿರೇಮಠ. ಶಿವರುದ್ರಯ್ಯ ಕಾಡದೇವರ. ಶಂಕರ ಅಂಗಡಿ. ಬಾಳಯ್ಯ ಕಾಡದೇವರ. ಚನ್ನಬಸಯ್ಯ ಮಠಪತಿ. ಮಲಕಯ್ಯ ಬಂಗಿ. ಬಸಯ್ಯ ಕತ್ತಿ. ಈರಯ್ಯ ಈಭೂತಿಮಠ. ಅಂದಾನಯ್ಯ ಕಾಡದೇವರ. ಬಸಯ್ಯ ವಸ್ತ್ರದ. ಕಾಡಯ್ಯ ಕಾಡದೇವರ. ಗುರುಪಾದಯ ಕಾಡದೇವರ. ಸಿದ್ದರಾಮ ಹಿರೇಮಠ.. ವಿಜಯಕುಮಾರ ಮಹಾಂತಯ್ಯ ಮಠಪತಿ. ಚಿದಾನಂದ ಹಿರೇಮಠ. ್ ಗುರುಲಿಂಗಯ್ಯ