ನಾವದಗಿ ಗ್ರಾಮದಲ್ಲಿ ಕುಲಷಿತ ನೀರು ಸೇವನೆ ಹಿನ್ನಲೆ ಗ್ರಾಮದ ಜನರಲ್ಲಿ ವಾಂತಿ ಬೇಧಿ ಸಮಸ್ಯೆ ಉಂಟಾಗಿದೆ.
ಹೌದು ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ನಾವದಗಿ ಗ್ರಾಮದ ಕಳೆದ ಎಂಟು ದಿನಗಳಿಂದ ಗ್ರಾಮದ ಜನರಲ್ಲಿ ವಾಂತಿ ಬೇಧಿ ಸಮಸ್ಯೆ ಉಂಟಾಗಿದೆ.
ಗ್ರಾಮಕ್ಕೆ ಬಾವಿಯ ನೀರು ಕುಡಿಯಲು ಪೂರೈಕೆ ಮಾಡಲಾಗುತ್ತಿದೆ. ಇದೇ ಬಾವಿಯ ನೀರಿನಿಂದ ವಾಂತಿ ಬೇಧಿ ಸಮಸ್ಯೆ ಉಂಟಾಗುತ್ತಿದೆ. ವಾಂತಿ ಬೇಧಿಯಿಂದ ಬಳಲುತ್ತಿರುವರಿಗೆ ತಾಳಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗ್ರಾಮದ 30 ರಿಂದ 40 ಜನರಲ್ಲಿ ಕಾಣಿಸಿಕೊಂಡ ವಾಂತಿ ಬೇಧಿ
ಸದ್ಯ ತಾಳಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂವರು ದಾಖಲು ಮಾಡಲಾಗಿದೆ. ಚಿಕಿತ್ಸೆ ಪಡೆದು ಸ್ವಗ್ರಾಮಕ್ಕೆ ಜನತೆ ತೆರಳಿದ್ದಾರೆ. ವಾಂತಿ ಬೇಧಿ ಸಮಸ್ಯೆಯಾಗಿದ್ದರೂ ಗ್ರಾಮಕ್ಕೆ ಬಾರದ ಆರೋಗ್ಯಾಧಿಕಾರಿಗಳ ವಿರುದ್ದ ಜನರು ಆಕ್ರೋಶ ಹೊರ ಹಾಕಿದ್ದಾರೆ. ಗ್ರಾಮದಲ್ಲಿನ ಸಮಸ್ಯೆ ಬಗೆ ಹರಿಸಬೇಕೆಂದು ನಾವದಗಿ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.