ಕಾಗವಾಡ: ಇಂದಿನ ಮಕ್ಕಳಿಗೆ ಮೊದಲು ಶಿಕ್ಷಣ ಪ್ರಾರಂಭವಾಗುವುದೇ ಅಂಗನವಾಡಿ ಕೇಂದ್ರಗಳಿಂದ , ಇಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮೌಲ್ಯಗಳನ್ನ ಕಲಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಾರೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಅವರು ಕಾಗವಾಡ ಪಟ್ಟಣದ ಗಣೇಶವಾಡಿ ರಸ್ತೆಗೆ ಸ್ಥಳಾಂತರವಾಗಿದ್ದ ಸಿಡಿಪಿಓ ಕಚೇರಿಯನ್ನ ಉದ್ಘಾಟನೆ ಮಾಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೋಬೈಲ್ ಪೋನ್ ಮತ್ತು ಸೀರೆಯನ್ನ ವಿತರಿಸಿ ಮಾತನಾಡುತ್ತಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯವಾಗುವ ದೃಷ್ಟಿಯಿಂದ ಸರ್ಕಾರು ಅವರಿಗೆ ಮೋಬೈಲ್ ಪೋನ್ ನೀಡಿದ್ದು ಇದರಿಂದ ಕಾರ್ಯಕರ್ತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ತಹಶೀಲ್ದಾರ್ ರಾಜೇಶ್ ಬುರ್ಲಿ ,ಇಓ ವೀರಣ್ಣ ವಾಲಿ,ಪಟ್ಟಣ ಪಂಚಾಯಿತಿ ಅಧಿಕಾರಿ ಕೆ ಕೆ ಗಾವಡೆ, ಸಿಡಿಪಿಓ ಸಂಜೀವಕುಮಾರ ಸದಲಗಿ,ಮುಖಂಡರಾದ ಉಮೇಶ ಪಾಟೀಲ,ರಮೇಶ್ ಚೌಗಲಾ, ಚಿದಾನಂದ ಅವಟಿ,ಸೌರಭಪಾಟೀಲ್, ವಿದ್ಯಾಧರ ದೋಂಡಾರೆ,ಸಚೀನ ಚೌಗಲೆ, ರಾಜು ಮದಮೆ,ಕಾಕಾ ಪಾಟೀಲ,ಸೇರಿದಂತೆ ಹಲವರು ಉಪಸ್ಥಿತರಿದ್ದರು