ಚಿಕ್ಕಬಳ್ಳಾಪುರ : ರಾಜ್ಯ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿರುವ ನೀತಿ ವಿರೋಧಿಸಿ ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತಿಭಟನೆ ನಡೆದಿದೆ. ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಭಾರೀ ಆಕ್ರೋಶ ಹೊರಹಾಕಿದರು.
ಸಂಸದ ಡಾ.ಕೆ.ಸುಧಾಕರ್ ಮಾತನಾಡಿ,
ಕಾಂಗ್ರೆಸ್ ಸರ್ಕಾರ ಅನೇಕ ಆಶ್ವಾಸನೆಗಳನ್ನ ನೀಡಿ ಬಡವರ ಉದ್ದಾರ ಮಾಡ್ತೀವಿ, ಕರ್ನಾಟಕದ ಗತವೈಭವ ಮರುಸ್ಥಾಪನೆ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದಿದ್ದಾರೆ. ಬಂದ ದಿನದಿಂದಲೂ ಪ್ರತಿ ದಿನವೂ ಬೆಲೆ ಏರಿಕೆ ಮಾಡ್ತಿದ್ದಾರೆ. ರೈತರಿಗೆ ಕೊಡಲಿ ಪೆಟ್ಟು ಕೊಡ್ತಿದ್ದಾರೆ. ಟ್ರಾನ್ಸ್ ಫರ್ಮರ್ ಹಾಕಿಸಿಕೊಳ್ಳಲು 3 ಲಕ್ಷ ಕೊಡಬೇಕು, ವಿದ್ಯುತ್ ದರ 7 ರೂಪಾಯಿಗೆ ಏರಿಸಿದ್ದಾರೆ,
ನಮ್ಮ ಕಾಲದಲ್ಲಿ 4 ರೂಪಾಯಿ ಇತ್ತು…ಎಲ್ಲವನ್ನೂ ಡಬಲ್ ಮಾಡಿದ್ದಾರೆ. ಹಾಲು, ಪೆಟ್ರೋಲ್, ಡೀಸೆಲ್ ಬೆಲೆಯೂ ಏರಿಕೆ ಮಾಡಿದ್ದು ಜನರಿಗೆ ತೊಂದರೆ ಮಾಡ್ತಿದ್ದು ಸರ್ಕಾರ ಈ ಕೂಡಲೇ ಡೀಸೆಲ್ ಪೆಟ್ರೋಲ್ ಮೇಲಿನ ಬೆಲೆ ಇಳಿಕೆ ಮಾಡಲೇಬೇಕು ಅಂತ ಆಗ್ರಹಿಸಿದರು. ಬಿಜೆಪಿ ಅವಧಿಯಲ್ಲಿ 50 ಪೈಸೆ ಏರಿಕೆ ಮಾಡಿದ್ದಕ್ಕೆ ಗಂಟೆಗಟ್ಟಲೇ ಭಾಷಣ ಮಾಡಿ ಬೆಲೆ ಏರಿಕೆ ಖಂಡಿಸಿದರು…ಈಗ ಸಿದ್ದರಾಮಯ್ಯನವರೇ ಇಷ್ಟು ದರ ಏರಿಸಿದ್ದಾರೆ ಅಂತ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.