ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರಗೆ ಹೊಸದಾಗಿ ಆಧಾರ್ ಮಾಡಿಸಲು, ತಿದ್ದುಪಡಿ ಮಾಡಲು ದಿನಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಅದರಲ್ಲೂ ಕೊಪ್ಪಳ ಜಿಲ್ಲೆಯ ಹಲವಡೆ ಜನರ ಪಾಡು ದೇವರಿಗೇ ಪ್ರೀತಿ ಅನ್ನುವಂತಹ ಸ್ಥಿತಿಯಿದೆ.
ಸರದಿ ಸಾಲಿನಲ್ಲಿ ನಿಂತು, ತಮ್ಮ ಸರದಿ ಯಾವಾಗ ಬರುತ್ತೋ, ಯಾವಾಗ ಮನೆಗೆ ಹೋಗುತ್ತೇವೋ, ಶಾಲೆಗೆ ಯಾವಾಗ ಹೋಗುವುದೋ ಎಂಬ ಆತಂಕದಲ್ಲಿ ಮಕ್ಕಳಿದ್ದರೆ, ಇನ್ನೊಂದಡೆ ಹೆತ್ತವರು ಕೂಡಾ ಒಂದು ದಿನದ ದುಡಿಮೆ ಬಿಟ್ಟು ಬಂದಿದ್ದೇವೆ. ಯಾವಾಗ ನಮ್ಮ ಸರದಿ ಬರುತ್ತೋ ಅಂತ ಕಾಯುತ್ತಿದ್ದರು. ಪುಟ್ಟ ಪುಟ್ಟ ಮಕ್ಕಳು ನಿಂತು ನಿಂತು ಸುಸ್ತಾಗಿ ಅಲ್ಲಿಯೇ ಮಲಗಿ ಬಿಟ್ಟಿದ್ದರು. ಇಂತಹದೊಂದು ದೃಶ್ಯಗಳು ಪ್ರತಿನಿತ್ಯ ಕಾಣ್ತಿರೋದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ. ಇನ್ನು ಇವರೆಲ್ಲಾ ಮುಂಜಾನೆಯಿಂದ ಸಂಜೆವರಗೆ ಕಾಯುತ್ತಿರುವುದು ಆಧಾರ್ಗಾಗಿ.
ಇದೀಗ ಶಾಲೆಗೆ ಅಡ್ಮಿಶಶ್ನಿಂದ ಹಿಡಿದು ವೃದ್ಧರ ಪಿಂಚಣಿ ಪಡೆಯಬೇಕಾದರೂ ಕೂಡಾ ಆಧಾರ ಕಾರ್ಡ್ ಬೇಕೇಬೇಕು. ಆಧಾರ ಇದ್ದರೆ ಮಾತ್ರ ಮುಂದಿನ ಕೆಲಸ ಎಂಬ ಸ್ಥಿತಿ ಎಲ್ಲೆಡೆ ಇದೆ. ಆದರೆ ಇದೇ ಆಧಾರ ಕಾರ್ಡ್ ಮಾಡಿಸಬೇಕಾದರೆ, ಆಧಾರ್ ತಿದ್ದುಪಡಿ ಮಾಡಬೇಕಾದರೆ ಜನರು ಸಾಕಷ್ಟು ಪಡಿಪಾಟಲು ಪಡಬೇಕಾದ ಸ್ಥಿತಿನಿರ್ಮಾಣವಾಗಿದೆ. ಅದರಲ್ಲೂ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಜನರು ಆಧಾರಗಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ