ಇಂದು ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಫೋನ್ ಗಳು ಇದ್ದೇ ಇರುತ್ತೆ, ಚಿಕ್ಕ ಮಕ್ಕಳಿಂದ ಹೊಡಿದು ವಯಸ್ಸಾದವರ ಕೈಯಲ್ಲೂ ಮೊಬೈಲ್ ಗಳಿರುತ್ತೆವೆ. ಆದರೆ ಕೆಲವೇ ಕೆಲವು ವರ್ಷಗಳಲ್ಲಿ ಈ ಮೊಬೈಲ್ ಗಳು ಮಾಯವಾಗಲಿದ್ದು ಅವುಗಳ ಬದಲು ನ್ಯೂರಾಲಿಂಕ್ನ ಮೆದುಳಿನ ಚಿಪ್ಗಳು ಬರಲಿದೆ ಎಂದು ಎಲಾನ್ ಮಾಸ್ಕ್ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ (x) ಪೋಸ್ಟ್ ಮಾಡಿರುವ ಅವರು, ಭವಿಷ್ಯದಲ್ಲಿ ಯಾವುದೇ ಫೋನ್ಗಳು ಇರುವುದಿಲ್ಲ, ಕೇವಲ ನ್ಯೂರಾಲಿಂಕ್ಗಳು ಎಂದು ಹೇಳಿದ್ದಾರೆ. ಮೆದುಳಿನ ಚಿಪ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯೂರಾಲಿಂಕ್ ಈಗಾಗಲೇ ಮೊದಲ ಮಾನವ ಪ್ರಯೋಗ ನಡೆಸುತ್ತಿದೆ. 29 ವರ್ಷದ ನೋಲ್ಯಾಂಡ್ ಅರ್ಬಾಗ್ ಎಂಬವರ ಮೇಲೆ ಈ ಪ್ರಯೋಗ ಮಾಡಲಾಗಿದೆ.ತಮ್ಮ ಹಣೆಯ ಮೇಲೆ ನ್ಯೂರಲ್ ನೆಟ್ವರ್ಕ್ ವಿನ್ಯಾಸದೊಂದಿಗೆ ಫೋನ್ ಅನ್ನು ಹಿಡಿದಿರುವ ಮಸ್ಕ್ನ ಎಐ ರಚಿತ ಚಿತ್ರವನ್ನು ಇದರೊಂದಿಗೆ ಪೋಸ್ಟ್ ಮಾಡಿದ್ದಾರೆ.
ಇದನ್ನು ನೋಡಿರುವ ಕೆಲವರು ತಮ್ಮ ಸಾಧನಗಳನ್ನು ಆಲೋಚನೆಯಿಂದ ನಿಯಂತ್ರಿಸಲು ನ್ಯೂರಾಲಿಂಕ್ ಇಂಟರ್ಫೇಸ್ ಅನ್ನು ಸ್ಥಾಪಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಹೊಸ ಎಕ್ಸ್ ಫೋನ್ ನಲ್ಲಿ ನಿಯಂತ್ರಿಸಲು ನಿಮ್ಮ ಮೆದುಳಿನಲ್ಲಿ ನ್ಯೂರಾಲಿಂಕ್ ಇಂಟರ್ ಫೇಸ್ ಅನ್ನು ಸ್ಥಾಪಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ನ್ಯೂರಾಲಿಂಕ್ನ ಮೊದಲ ಬಾರಿಗೆ ಪ್ರಯೋಗಿಸಿರುವ ಮಾನವ ಅರ್ಬಾಗ್ ಎಂಟು ವರ್ಷಗಳ ಹಿಂದೆ ಅಪಘಾತದ ಅನಂತರ ಭುಜದಿಂದ ಕೆಳಕ್ಕೆ ಪಾರ್ಶ್ವವಾಯುವಿಗೆ ಒಳಗಾದರು. ಅವರು ಜನವರಿ 28ರಂದು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅದರ ಬಳಿಕ ನ್ಯೂರಾಲಿಂಕ್ ಬ್ಲಾಗ್ಪೋಸ್ಟ್ನಲ್ಲಿ ಈ ಕುರಿತು ವಿವರವಾದ ಮಾಹಿತಿಯನ್ನು ಬಹಿರಂಗಪಡಿಸಿತು.