ಕಳ್ಳಭಟ್ಟಿ ದುರಂತ ಹಿನ್ನೆಲೆ ತಮಿಳುನಾಡಿನಲ್ಲಿ ಸಾವಿನ ಸಂಖ್ಯೆ 55 ಕ್ಕೆ ಏರಿಕೆ ಆಗಿದೆ. ಇದು ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತ ಎನ್ನಲಾಗಿದೆ.
ಅಕ್ರಮ ಮದ್ಯ ಸೇವಿಸಿದ 100 ಕ್ಕೂ ಹೆಚ್ಚು ಜನರು ಇನ್ನೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಲ್ಲುಪುರಂ ಜಿಲ್ಲೆಯ ಕಲ್ಲಕುರಿಚಿಯ ಸುಮಾರು 200 ಜನರನ್ನು ಬುಧವಾರ ಕಳ್ಳಭಟ್ಟಿ ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ವಶಪಡಿಸಿಕೊಂಡ 200 ಲೀಟರ್ ಕಳ್ಳಭಟ್ಟಿಯಲ್ಲಿ ಮಾರಣಾಂತಿಕ ಮೆಥನಾಲ್ ಇದೆ ಎಂದು ಪರೀಕ್ಷೆಗಳಿಂದ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ.
ಅಲ್ಲಿನ ಸಿಎಂ ಎಂಕೆ ಸ್ಟಾಲಿನ್ ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು,ಪ್ರಕರಣವನ್ನು ಸಿಬಿ-ಸಿಐಡಿಗೆ ವರ್ಗಾಯಿಸಲು ಆದೇಶಿಸಿದ್ದಾರೆ. ಕಲ್ಲಕುರಿಚಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲು ಆದೇಶಿಸಿದ ಸಿಎಂ, ಜಿಲ್ಲೆಯ ಮದ್ಯಪಾನ ಮತ್ತು ನಿಷೇಧಿತ ವಿಭಾಗದ ಅಧಿಕಾರಿಗಳ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಒಂಬತ್ತು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಹಾಗೂ ಚಿಕಿತ್ಸೆ ಪಡೆಯುತ್ತಿರುವವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಸಿಎಂ ಘೋಷಿಸಿದ್ದಾರೆ.