ಬೆಂಗಳೂರು: ಸಚಿವ ವಿ. ಸೋಮಣ್ಣ ತನ್ನ ರಾಜಕೀಯ ಜೀವನವನ್ನ ನೆನೆದು ಕಣ್ಣೀರಿಟ್ಟರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆ ಇದ್ದ ಫೋಟೋ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಬೆಂಗಳೂರಿಗೆ ಬಂದು 56 ವರ್ಷ ಆಗಿದೆ. ನನ್ನ ಜೀವನವನ್ನ ನಾನೇ ಕಟ್ಟಿಕೊಂಡಿದ್ದೇನೆ, ಇನ್ನೊಬ್ಬರನ್ನ ತೇಜೋವಧೆ ಮಾಡುವುದು ಒಳ್ಳೆಯದಲ್ಲ, ಸಂಜೆ ಕಾಲೇಜಿನಲ್ಲಿ ಓದಿದ್ದೇನೆ, ಕಸ್ತೂರಿ ಮಾತ್ರೆ ಮಾರಿದ್ದೇನೆ. ಆರು- ಎಂಟು ಅಡಿ ರೂಮಿನಲ್ಲಿ ಜೀವನ ಮಾಡಿವನು. ಎಂಟು ವರ್ಷ ವಠಾರದಲ್ಲಿ ಇದ್ದವನು.
ಕರ್ತವ್ಯವನ್ನೇ ದೇವರು ಎಂದು ನಂಬಿದವನು ನಾನು, ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನಾನು ಯಾರಿಗೂ ಬಗ್ಗಿದವನು ಅಲ್ಲ, ಜಗ್ಗಿದವು ಅಲ್ಲ. ನನ್ನ ಜೀವನ ನಾನೇ ರೂಪಿಸಿಕೊಂಡವನು ನಾನು. ಕಳೆದ 8-10 ದಿನಗಳಿಂದ ಏನು ಎಲ್ಲರೂ ಮಜಾ ತಗೋತಾ ಇದ್ದೀರಲ್ಲ, ಇದು ಒಳ್ಳೆಯದಲ್ಲ, ನಾನು ಪಿಗ್ನಿ ಕಲೆಕ್ಟ್ ಮಾಡಿದ್ದೇನೆ, ನಾನು ಅಂದು ಹಿಂತಿರುಗಿ ನೋಡಿದವನು ಅಲ್ಲ. ನಾನು ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರ ಸ್ವಾಮಿಗಳು, ಸಿದ್ದಗಂಗೆಯ ಶ್ರೀ ಶಿವಕುಮಾರ್ ಸ್ವಾಮೀಜಿಗಳು ನನಗೆ ಮಾರ್ಗದರ್ಶನದಲ್ಲಿ ಬೆಳೆದವನು ನಾನು, ಒಬ್ಬರನ್ನ ಅನವಶ್ಯಕವಾಗಿ ತೋಜೋವಧೆ ಮಾಡಬೇಡಿ ಎಂದು ಕಣ್ಣೀರಿಟ್ಟರು.
ನನ್ನ ಕರ್ತವ್ಯವನ್ನ ನಾನು ಮರೆತಿಲ್ಲ, ಎಲ್ಲಾ ಬೈ ಎಲೆಕ್ಷನ್ ಅನ್ನ ಗೆದ್ದಿದ್ದೇವೆ. ಚನ್ನಪಟ್ಟಣ, ಕಡೂರು, ದೇವದುರ್ಗ, ಬಸವ ಕಲ್ಯಾಣ, ಹೊಸಪೇಟೆ, ಕೊಪ್ಪಳ, ಸಿಂಧಗಿ, ಚಿಂಚೋಳಿವರೆಗೂ ಎಲ್ಲಾ ಬೈ ಎಲೆಕ್ಷನ್ ನನಗೆ ಕೊಟ್ಟರು. ನಾನು ಪಕ್ಷಕ್ಕೆ ಒಬ್ಬ ನಿಷ್ಠನಾಗಿ ನನ್ನದೇ ಆದಂತಹ ದುಡಿಮೆಯನ್ನ ಮಾಡಿಕೊಂಡು ಕೆಲಸ ಮಾಡಿದ್ದೇನೆ. ನಾನು ಯಾವ ಪಕ್ಷದಲ್ಲಿ ಇರುತ್ತೇನೋ ಆ ಪಕ್ಷವನ್ನ ತಾಯಿಯಾಗಿ ಸ್ವೀಕಾರ ಮಾಡಿದ್ದೇನೆ.
ನನಗೆ ಡಬ್ಬಲ್ ಸ್ಟಾಂಡರ್ಡ್ ಗೊತ್ತಿಲ್ಲ, ಇನ್ನೊಬ್ಬರ ಆಗೆ ಇಲ್ಲೊಂದು ಹೇಳೋದು, ಅಲ್ಲೊಂದು ಹೇಳೋದು ಗೊತ್ತಿಲ್ಲ. ನನಗೆ ಈ ಇಬ್ಬರು ಗುರುಗಳು ಸಂಸ್ಕಾರ ಕೊಟ್ಟಿದ್ದರಿಂದ, ನಾನು ಯಾವುದೇ ಕೆಲಸ ಮಾಡಿದರು ನನಗೆ ಅವರು ಹತ್ತಾರು ಬಾರಿ ನೆನಪಿಗೆ ಬರುತ್ತಾರೆ. ಹಾಗಾಗಿ ನಾನು ಕಠಿಣವಾಗಿ ಮಾತನಾಡುತ್ತೇನೆ ಎಂದು ತುಪ್ಪ ಸುರಿದು ನನ್ನನ್ನ ಖಳನಾಯಕನಾಗಿ ಮಾಡಿದ್ದೀರಿ, ನಾನು ಎಂದಾದರು ಕೂಡಾ ಬಿಜೆಪಿ ಬಿಡುತ್ತೇನೆ ಎಂದು ಹೇಳಿದ್ದೇನಾ ಎಂದು ಪ್ರಶ್ನೆ ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು.
ಅದ್ಯಾವುದೋ ಶಿವಕುಮಾರ್ ಜೊತೆಗಿನ ಫೋಟೋ ತೋರಿಸುತ್ತೀರಾ, ನಾನೊಬ್ಬ ಮಂತ್ರಿ ರೀ, ಯಾವುದೋ ಕಾಲದಲ್ಲಿ ಅವನ ಜೊತೆಯಲ್ಲಿ ಫ್ಲೈಟ್ನಲ್ಲಿ ಬಂದಿದ್ದೇ, ಶಿವಕುಮಾರ್ ನನ್ನ ಊರಿನ ಐದಾರು ಕಿಲೋ ಮೀಟರ್ ದೂರದಲ್ಲಿ ಇರುವ ಹಳ್ಳಿಯಲ್ಲಿರುವವರು, ಸಿದ್ದರಾಮಯ್ಯ ನಾನು ಒಟ್ಟಿಗೆ ಮಂತ್ರಿಯಾಗಿ ಜೊತೆಯಲ್ಲಿ ಕೆಲಸ ಮಾಡಿದವರು. ಈ ರೀತಿ ನೀವು ಮಾಧ್ಯಮದವರಾದರೆ ಗೌರವಸ್ಥರಾದವರು ಹೇಗಪ್ಪ ಬದುಕಬೇಕು ಎಂದು ನೀವೇ ತೀರ್ಮಾನ ಮಾಡಿ ಎಂದು ಪ್ರಶ್ನೆ ಮಾಡಿದರು. ಫೋಟೋ ಬಗ್ಗೆ ನನಗೆ ಸ್ಪಷ್ಟತೆ ಕೊಡುವ ಅವಶ್ಯಕತೆ ಎನಿದೆ. ಇದನ್ನ ಸೃಷ್ಟಿ ಮಾಡುತ್ತಿರುವ ಪುಣ್ಯಾತ್ಮ ಯಾರೆಂದು ನಿಮಗೆ ಗೊತ್ತಿದೆ. ಆ ಪುಣ್ಯಾತ್ಮ ಮಾಡುವುದಕ್ಕೆ ನಾನ್ಯಾಕೆ ಬರಬೇಕು ಎಂದು ಪ್ರಶ್ನೆ ಮಾಡಿದರು.