ಜಿನೀವಾ:- ಭಾರತೀಯ ಕಾರ್ಮಿಕರಿಗೆ ಶೋಷಣೆ ಆರೋಪದಡಿ ಹಿಂದೂಜಾ ಕುಟುಂಬದವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ವಿಸ್ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಕುಟುಂಬದ ಪ್ರಕಾಶ್ ಹಿಂದೂಜಾ ಅವರ ಪತ್ನಿ ಕಮಲ್ ಇವರಿಗೆ ತಲಾ ನಾಲ್ಕು ವರ್ಷ ಮತ್ತು ಆರು ತಿಂಗಳ ಶಿಕ್ಷೆ ಪ್ರಕಟಿಸಲಾಗಿದೆ. ಅವರ ಮಗ ಅಜಯ್ ಮತ್ತು ಅವರ ಪತ್ನಿ ನಮ್ರತಾಗೆ ತಲಾ ನಾಲ್ಕು ವರ್ಷಗಳ ಅವಧಿ ಶಿಕ್ಷೆ ವಿಧಿಸಲಾಗಿದೆ.
ಕುಟುಂಬವು ಜಿನೀವಾದಲ್ಲಿ ಹೊಂದಿರುವ ಮಹಲಿನಲ್ಲಿ ಕೆಲಸಕ್ಕಿದ್ದವರನ್ನು ಶೋಷಣೆ ಮಾಡಿದ ಆರೋಪದಲ್ಲಿ ಈ ಶಿಕ್ಷೆ ಪ್ರಕಟಿಸಲಾಗಿದೆ. ಇದನ್ನು ಪ್ರಶ್ನಿಸಿರುವ ಹಿಂದೂಜಾ ಕುಟುಂಬ ಈಗ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.
ಭಾರತದಿಂದ ಮನೆ ಕೆಲಸಕ್ಕೆಂದು ಜಿನೀವಾಗೆ ಕರೆದುಕೊಂಡು ಹೋದವರ ಪಾಸ್ಪೋರ್ಟ್ಗಳನ್ನು ಹಿಂದೂಜಾ ಕುಟುಂಬದವರು ಮುಟ್ಟುಗೋಲು ಹಾಕಿಕೊಂಡಿದ್ದರು. ಅಷ್ಟೇ ಅಲ್ಲದೆ, ಆ ಕಾರ್ಮಿಕರ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದರು. ಜತೆಗೆ ಸಿಬ್ಬಂದಿಯನ್ನು ದುರುಪಯೋಗ ಪಡಿಸಿಕೊಂಡಿದ್ದರು ಎಂಬ ಆರೋಪಗಳ ಅಡಿ ದೂರು ದಾಖಲಾಗಿತ್ತು.