ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ಜೈಲು ಸೇರಿದ್ದಾರೆ. ದರ್ಶನ್ಗೆ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪವಿತ್ರಾ ಗೌಡ ಸೇರಿದಂತೆ ಹಲವು ಮೂರು ದಿನಗಳ ಹಿಂದೆ ಜೈಲು ಸೇರಿದ್ದಾರೆ. ನಿನ್ನೆ ದರ್ಶನ್ ಸೇರಿ ಉಳಿದ ನಾಲ್ವರು ಕೂಡ ಪರಪ್ಪನ ಅಗ್ರಹಾರಕ್ಕೆ ತೆರಳಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಿಂದ ದರ್ಶನ್ ಅವರನ್ನು ಬಿಗಿ ಪೊಲೀಸ್ ಭಧ್ರತೆಯಲ್ಲಿ ಬೆಂಗಳೂರಿನ ಕೋರ್ಟ್ಗೆ ಹಾಜರು ಪಡಿಸಲಾಯಿತು. ಇದೇ ವೇಳೆ ದರ್ಶನ್ ಪರ ವಕೀಲರು ಹಾಗೂ ಎಸ್ಪಿಪಿ ಪರ ವಾದ ಪ್ರತಿ ವಾದಗಳು ನಡೆಯಿತು. ಈ ವೇಳೆ ಎಸ್ಪಿಪಿ ಕೋರ್ಟ್ ಒಂದು ಮನವಿಯನ್ನು ಮಾಡುತ್ತಾರೆ. ಬಂಧಿತರನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ವಿಚಾರಣೆಯನ್ನು ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.
ನಟ ದರ್ಶನ್ ಹಾಗೂ ಉಳಿದ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಆದರೆ ಇದಕ್ಕೆ ಎಸ್ಪಿಪಿ ಬೇರೆ ಜೈಲಿಗೆ ಕಳುಹಿಸುವಂತೆ ಮನವಿಯನ್ನು ಮಾಡಿದ್ದರು. ಈ ಎಲ್ಲ ಆರೋಪಿಗಳು ಒಂದೇ ಕಡೆ ಇದ್ದಲ್ಲಿ ಬೇರೆ ಬೇರೆ ಸಂಚು ರೂಪಿಸುತ್ತಾರೆ. ಮಾತನಾಡಿಕೊಳ್ಳುತ್ತಾರೆ ಎಂಬ ವಾದವನ್ನು ಎಸ್ಪಿಪಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಮನವಿಗೆ ದರ್ಶನ್ ಪರ ವಕೀಲರು ತಕರಾರು ಎತ್ತಿದ್ದಾರೆ. ಒಂದು ವೇಳೆ ಬೇರೆ ಜೈಲುಗಳಿಗೆ ಆರೋಪಿಗಳನ್ನು ಕಳುಹಿಸಿದರೆ, ಅವರನ್ನು ನಾವು ಸಂಪರ್ಕ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಮುಂದೇ ಇಟ್ಟಿದ್ದಾರೆ. ವಾದ ಪ್ರತಿ ವಾದವನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.
ಇನ್ನು ದರ್ಶನ್ ಅವರನ್ನು ಕೋರ್ಟ್ ಹಾಲ್ನಿಂದ ಕರೆದುಕೊಂಡು ಬಂದು, ಪೊಲೀಸರು ತಂದಿದ್ದ ಜೀಪ್ನಲ್ಲಿ ಕೂರಿಸುತ್ತಿದ್ದಾಗ ಅಭಿಮಾನಿಗಳು ಜಮಾಯಿಸಿದ್ದರು. ದರ್ಶನ್ರನ್ನು ಕಂಡು ಅಭಿಮಾನಿಗಳು ಘೋಷಣೆಗಳನ್ನು ಕೂಗಿದರು. ಅಭಿಮಾನಿಗಳತ್ತ ಕೈ ಬೀಸಿದ ದರ್ಶನ್, ಕೈ ಮುಗಿದು ಕುಳಿತುಕೊಂಡರು. ಇಲ್ಲಿಂದ ಪರಪ್ಪನ್ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡುವವರೆಗೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಸ್ತೆಯ ಹಲವು ಕಡೆ ಅಭಿಮಾನಿಗಳು ಜಮಾಯಿಸಿದ್ದರು, ಈ ಅಭಿಮಾನಿಗಳನ್ನು ಚದುರಿಸುವುದೇ ಪೊಲೀಸರು ಹರಸಾಹಸ ಪಡುವಂತಾಯ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಎಲ್ಲ ಆರೋಪಿಗಳು ಪರಪ್ಪನ್ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಜೈಲಿನಲ್ಲಿ ಎಲ್ಲ ಖೈದಿಗಳಿಗೂ ನೀಡುವಂತೆ ದರ್ಶನ್ಗೂ ಖೈದಿ ನಂಬರ್ ನೀಡಲಾಗಿದೆ. ದರ್ಶನ್ಗೆ 6106 ನಂಬರ್ ನೀಡಲಾಗಿದೆ ಎಂದು ತಿಳಿದು ಬಂದಿದೆ.