ವಿಶದಕಪ್ ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಮಾಡಿದ್ದಾರೆ.
ಭಾರತವು ಸೂಪರ್-8 ಪಂದ್ಯದಲ್ಲಿ ಬಾಂಗ್ಲಾದೇಶವನ್ನು 50 ರನ್ಗಳಿಂದ ಸೋಲಿಸಿತು. ಈ ಗೆಲುವಿನಲ್ಲಿ ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದರು.
27 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದ್ದಲ್ಲದೆ, ಒಂದು ವಿಕೆಟ್ ಪಡೆದರು.
ಇದರೊಂದಿಗೆ ಹಾರ್ದಿಕ್ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯನ್ನೂ ಮಾಡಿದ್ದಾರೆ. ಟಿ20 ವಿಶ್ವಕಪ್ನಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದ ಹಾಗೂ 20ಕ್ಕೂ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಹಾರ್ದಿಕ್ಗೂ ಮೊದಲು ಭಾರತದ ಯಾವುದೇ ಆಲ್ರೌಂಡರ್ಗೂ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಯುವರಾಜ್ ಸಿಂಗ್ ರಿಂದ ಹಿಡಿದು ಇರ್ಫಾನ್ ಪಠಾಣ್ವರೆಗೂ ಯಾವ ಆಲ್ರೌಂಡರ್ಗೂ ಸಾಧ್ಯವಾಗದ ಸಾಧನೆಯನ್ನು ಇದೀಗ ಹಾರ್ದಿಕ್ ಪಾಂಡ್ಯ ಮಾಡಿದ್ದಾರೆ.
ಹಾರ್ದಿಕ್ ಹೊರತುಪಡಿಸಿ, ಯುವರಾಜ್ ಭಾರತದ ಪರ ಟಿ20 ವಿಶ್ವಕಪ್ನಲ್ಲಿ 593 ರನ್ ಮತ್ತು 12 ವಿಕೆಟ್ ಪಡೆದಿದ್ದಾರೆ. ರವೀಂದ್ರ ಜಡೇಜಾ 102 ರನ್ ಜೊತೆಗೆ 22 ವಿಕೆಟ್ ಪಡೆದಿದ್ದರೆ, ಇರ್ಫಾನ್ ಪಠಾಣ್ 86 ರನ್ ಬಾರಿಸಿ 16 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಸುರೇಶ್ ರೈನಾ 453 ರನ್ ಬಾರಿಸಿ ಐದು ವಿಕೆಟ್ ಪಡೆದಿದ್ದಾರೆ. ಆದಾಗ್ಯೂ, ಪಾಂಡ್ಯ ಹೊರತುಪಡಿಸಿ, ಯಾರೂ 300+ ರನ್ ಬಾರಿಸಿಲ್ಲ ಅಥವಾ 20+ ವಿಕೆಟ್ ತೆಗೆದುಕೊಂಡಿಲ್ಲ. ಟಿ20 ವಿಶ್ವಕಪ್ ವೃತ್ತಿಜೀವನದಲ್ಲಿ, ಪಾಂಡ್ಯ ಆಡಿರುವ 21 ಪಂದ್ಯಗಳ 13 ಇನ್ನಿಂಗ್ಸ್ಗಳಲ್ಲಿ 27.45 ಸರಾಸರಿ ಮತ್ತು 137.89 ಸ್ಟ್ರೈಕ್ ರೇಟ್ನಲ್ಲಿ 302 ರನ್ ಬಾರಿಸಿದ್ದಾರೆ. ಇದರಲ್ಲಿ ಎರಡು ಅರ್ಧ ಶತಕಗಳು ಸೇರಿವೆ. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 63 ರನ್ ಆಗಿದೆ.