‘ಸೀತಾರಾಮಂ’ ಸಿನಿಮಾದ ಮೂಲಕ ನಟಿ ಮೃಣಾಲ್ ಠಾಕೂರ್ ಲೈಫ್ ಸಂಪೂರ್ಣವಾಗಿ ಬದಲಾಯ್ತು. ಈ ಚಿತ್ರದ ಬಳಿಕ ಮೃಣಾಲ್ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ಆ ಬಳಿಕ ಮೃಣಾಲ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಎರಡು ವರ್ಷಗಳ ಬಳಿಕ ಮತ್ತೆ ಸೀತಾರಾಂ ಚಿತ್ರದ ಜೋಡಿ ಸ್ಕ್ರೀನ್ ಮೇಲೆ ಒಂದಾಗಲು ರೆಡಿಯಾಗಿದೆ.
2022ರಲ್ಲಿ ಸೀತಾರಾಮಂ ಸಿನಿಮಾ ರಿಲೀಸ್ ಆಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಜೋಡಿ ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದರು. ಸೀತಾ ಮತ್ತು ರಾಮ್ ಲವ್ ಸ್ಟೋರಿ ನೋಡಿ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ಬಂದಿತ್ತು. ಈ ಜೋಡಿ ಮತ್ತೆ ತೆರೆ ಮೇಲೆ ಒಂದಾಗಬೇಕು ಎಂದು ಸಿನಿ ರಸಿಕರು ಆಸೆಪಟ್ಟಿದ್ದರು. ಇದೀಗ ಅದೇ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮೃಣಾಲ್ ನಟಿಸುವ ಬಗ್ಗೆ ಈ ಹಿಂದೆಯೇ ವರದಿಯಾಗಿತ್ತು. ಆದರೆ ಈಗ ದುಲ್ಕರ್ ಸಲ್ಮಾನ್ ಕೂಡ ನಟಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಅತಿಥಿ ಪಾತ್ರವಾಗಿದ್ರೂ ಚಿತ್ರದಲ್ಲಿ ತಿರುವು ಕೊಡಲಿರುವ ಪಾತ್ರಕ್ಕೆ ಜೀವತುಂಬಲಿದ್ದಾರೆ ಎನ್ನಲಾಗಿದೆ.
ಅಂದಹಾಗೆ, ‘ಕಲ್ಕಿ 2898 ಎಡಿ’ ಸಿನಿಮಾ ಇದೇ ಜೂನ್ 27ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿರೋದು ವಿಶೇಷ. ಇತ್ತೀಚೆಗೆ ಚಿತ್ರದ ಪ್ರೀರಿಲೀಸ್ ಈವೆಂಟ್ ಕೂಡ ಅದ್ದೂರಿಯಾಗಿ ನಡೆದಿದ್ದು ಇನ್ನೆರಡು ದಿನದಲ್ಲಿ ಸಿನಿಮಾ ರಿಲಿಸ್ ಆಗಲಿದೆ.