ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ 2024-25 ನೇ ಶೈಕ್ಷಣಿಕ ಸಾಲಿಗೆ ಎಐ ಪದವಿ ಕೋರ್ಸ್ಗಳನ್ನು ಪರಿಚಯಿಸಿದೆ. ಮೂರು ವಿಷಯಗಳಲ್ಲಿ ಪದವಿ ದೊರೆಯಲಿದ್ದು, ಅವುಗಳೆಂದರೆ ಎಐ ಡಾಟಾ ಅನಾಲಿಸಿಸ್, ಎಐ ಮಿಷನ್ ಲರ್ನಿಂಗ್, ಹಾಗೂ ಪುಲ್ ಸ್ಟಾಕ್ ಡೆವಲೆಪಮೆಂಟ್ ಮೂರು ಆಗಿವೆ.
ಪರೀಕ್ಷೆಯಲ್ಲಿ ನಕಲು ಪತ್ತೆಹಚ್ಚಲು, ಟ್ರಾಫಿಕ್ ನಿಯಂತ್ರಣಕ್ಕೆ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಸದ್ಯ AI ತಂತ್ರಜ್ಞಾನಗಳ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಬೆಂಗಳೂರು ಜ್ಞಾನ ಭಾರತಿ ವಿಶ್ವವಿದ್ಯಾಲಯ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆಯ ಕೋರ್ಸ್ ಆರಂಭಕ್ಕೆ ಮುಂದಾಗಿದೆ.
ಪಿಯುಸಿ ಬಳಿಕ ವೃತ್ತಿಪರ ಕೋರ್ಸ್ಗಳ ಹುಡಕಾಟದಲ್ಲಿರುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್ ಆರಂಭಿಸಲಾಗುತ್ತಿದೆ. ಇಂಥ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡೇ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿಮಾಡಿರುವ ಈ ಕೋರ್ಸ್ ಶುರು ಮಾಡಲು ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ ಮುಂದಾಗಿದೆ ಎಂದು ಕುಲಪತಿ ಜಯಕರ ಶೆಟ್ಟಿ ತಿಳಿಸಿದ್ದಾರೆ. ಸದ್ಯ ಮೂರು ವರ್ಷದ ಮೂರು ಬೇರೆ ಬೇರೆಯಾದ ಎಐ ಕೋರ್ಸ್ಗಳನ್ನ ಶುರು ಮಾಡಲಾಗುತ್ತಿದ್ದು, ಇದರ ಬೇಡಿಕೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಸ್ನಾತ್ತೋಕತ್ತರ ಪದವಿಯಲ್ಲಿಯೂ ಈ ತಂತ್ರಜ್ಞಾನ ಕೋರ್ಸ್ ಆರಂಭಿಸುವ ಬಗ್ಗೆ ವಿಶ್ವವಿದ್ಯಾಲಯ ಚಿಂತನೆ ಮಾಡಿದೆ