13 ವರ್ಷದ ಬಾಲಕಿ ಶಿಕ್ಷಕಿಯ ಮುಂದೆ ತನ್ನ ಅತ್ಯಾಚಾರದ ಗುಟ್ಟು ಬಿಚ್ಚಿಟ್ಟಿದ್ದು, ನಿಜಕ್ಕೂ ಇದು ಹೇಯ ಕೃತ್ಯ ಎಂದರೆ ತಪ್ಪಾಗಲಾರದು.
ತಂದೆ, ಚಿಕ್ಕಪ್ಪ ಹಾಗೂ ಸೋದರ ಸಂಬಂಧಿಯಿಂದ ಪದೇ ಪದೇ ತನ್ನ ಮೇಲೆ ಅತ್ಯಾಚಾರ ನಡೆದಿರುವ ವಿಚಾರವನ್ನು 13 ವರ್ಷದ ಬಾಲಕಿ ಶಿಕ್ಷಕಿಯ ಮುಂದೆ ಬಿಚ್ಚಿಟ್ಟಿದ್ದಾಳೆ.
ಶಾಲೆಯಲ್ಲಿ ಒಳ್ಳೆಯ ಸ್ಪರ್ಶ ಯಾವುದು, ಕೆಟ್ಟ ಸ್ಪರ್ಶ ಯಾವುದು ಎಂಬುದರ ಕುರಿತು ವಿದ್ಯಾರ್ಥಿನಿಯರಿಗೆ ಶಿಕ್ಷಕರು ಮನದಟ್ಟು ಮಾಡಿಕೊಡುತ್ತಿದ್ದರು. ಆ ಸಮಯದಲ್ಲಿ ವಿದ್ಯಾರ್ಥಿನಿ ನಡೆದಿರುವ ಎಲ್ಲಾ ವಿಚಾರವನ್ನು ತೆರೆದಿಟ್ಟಿದ್ದಾಳೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಕೆಟ್ಟ ಸ್ಪರ್ಶ ಯಾವುದು ಎಂದು ಹೇಳಿಕೊಡುತ್ತಿರುವಾಗ ಆಕೆ ನಡೆದಿರುವ ಎಲ್ಲಾ ವಿಚಾರವನ್ನು ಬಹಿರಂಗಪಡಿಸಿದ್ದಾಳೆ. ಆಕೆಯ ಸೋದರ ಸಂಬಂಧಿ 2023ರಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ಹಲ್ಲೆ ಕೂಡ ನಟೆಸಿದ್ದಾನೆ, ಆದರೆ ಯಾರಿಗಾದರೂ ಹೇಳಿದರೆ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು.
2024ರ ಜನವರಿಯಲ್ಲಿ ಆಕೆಯ ಚಿಕ್ಕಪ್ಪ ಅತ್ಯಾಚಾರವೆಸಗಿದ್ದರು, ಇದನ್ನು ವಿರೋಧಿಸಿ ಕಿರುಚಾಡಿದಾಗ ಆಕೆಯ ಬಾಯಿಯನ್ನು ಕಟ್ಟಿ ಆಕೆಯ ಮೇಲೆ ಹಲ್ಲೆ ನಡೆಸಿದ್ದರು ಎಂದು ಆಕೆ ತಿಳಿಸಿದ್ದಾಳೆ. ಬಾಲಕಿ ತಂದೆ ಕೂಡ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎನ್ನುವ ಆತಂಕದ ವಿಚಾರವನ್ನು ಕೂಡ ಆಕೆ ಹೇಳಿಕೊಂಡಿದ್ದಾಳೆ. ಒಳ್ಳೆಯ ಸ್ಪರ್ಶ ಹಾಗೂ ಕೆಟ್ಟ ಸ್ಪರ್ಶ ಕುರಿತು ಶಾಲೆಯಲ್ಲಿ ನಡೆದ ಕೌನ್ಸೆಲಿಂಗ್ ಸಮಯದಲ್ಲಿ ಬಾಲಕಿ ಈ ವಿಚಾರವನ್ನು ತಿಳಿಸಿದ್ದಾಳೆ