ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಝಹೀರ್ ಇಕ್ಬಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತರ ಸಮ್ಮುಖದಲ್ಲಿ ಮದುವೆಯಾದ ಜೋಡಿ ಬಳಿಕ ಅದ್ದೂರಿಯಾಗಿ ರಿಸೆಪ್ಷನ್ ಹಮ್ಮಿಕೊಂಡಿದ್ದರು.
ಕೆಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಜಹೀರ್ ಇಕ್ಬಾಲ್ ಜೊತೆ ಸಿವಿಲ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಮದುವೆಯ ನಂತರ ಪತಿಯೊಂದಿಗೆ ತಮ್ಮ ಮೊದಲ ಫೋಟೋವನ್ನು ನಟಿ ಸೋನಾಕ್ಷಿ ಹಂಚಿಕೊಂಡಿದ್ದಾರೆ.
ಜೂನ್ 23 ರಂದು ಭಾನುವಾರ ಮುಂಬೈನಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ನಾಗರಿಕ ವಿವಾಹವಾಗಿದ್ದಾರೆ. ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಮತ್ತು ಅವರ ಪತಿ ಆಯುಷ್ ಶರ್ಮಾ ಸೇರಿದಂತೆ ಅನೇಕ ಗಣ್ಯರು ಹಾಜರಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಮುದ್ದಿನ ಮಗಳು ಸೋನಾಕ್ಷಿ ಸಿನ್ಹಾ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಂದರ್ಭದಲ್ಲಿ ವೇದಿಕೆಗೆ ಕರೆದುಕೊಂಡು ಹೋಗ್ತಿದ್ದ ಸಹೋದರರನ್ನು ಕಂಡು ನಟಿ ಸೋನಾಕ್ಷಿ ಭಾವುಕರಾಗಿ ಕಣ್ಣೀರು ಹಾಕಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೋನಾಕ್ಷಿ ಸಿನ್ಹಾ ಮತ್ತು ಝಹೀರ್ ಇಖ್ಬಾಲ್ ಅವರದ್ದು 7 ವರ್ಷಗಳ ಹಿಂದಿನ ಪ್ರೀತಿ. ತಮ್ಮಿಬ್ಬರ ಪ್ರೇಮ್ ಕಹಾನಿ ಬಗ್ಗೆ ಅವರು ಸಾಧ್ಯವಾದಷ್ಟು ಗೌಪ್ಯತೆ ಕಾಪಾಡಿಕೊಂಡಿದ್ದರು. ಈಗ ಅವರು ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಅಂದಹಾಗೆ, 7 ವರ್ಷಗಳ ಹಿಂದೆ ಪ್ರೀತಿ ಚಿಗುರಿದ ಈ ದಿನಾಂಕದಲ್ಲೇ (ಜೂನ್ 23) ಅವರು ಮದುವೆ ಮಾಡಿಕೊಂಡಿದ್ದಾರೆ.
“ಏಳು ವರ್ಷಗಳ ಹಿಂದೆ (23.06.2017) ಇದೇ ದಿನ, ನಾವು ಪರಸ್ಪರರ ಕಣ್ಣುಗಳಲ್ಲಿ ಪ್ರೀತಿಯನ್ನು ಅದರ ಶುದ್ಧ ರೂಪದಲ್ಲಿ ನೋಡಿದ್ದೇವೆ ಮತ್ತು ಅದನ್ನು ಹಿಡಿದಿಡಲು ನಿರ್ಧರಿಸಿದ್ದೇವು. ಇಂದು ಆ ಪ್ರೀತಿಯು ಎಲ್ಲಾ ಸವಾಲುಗಳು ಮತ್ತು ವಿಜಯಗಳ ಮೂಲಕ ನಮಗೆ ಮಾರ್ಗದರ್ಶನ ನೀಡಿದೆ . ನಮ್ಮ ಎರಡೂ ಕುಟುಂಬಗಳು ಮತ್ತು ನಮ್ಮ ಎರಡೂ ದೇವರುಗಳ ಆಶೀರ್ವಾದದೊಂದಿಗೆ ನಾವು ಈಗ ಗಂಡ-ಹೆಂಡತಿಯಾಗಿದ್ದೇವೆ. ಇಲ್ಲಿ ಪ್ರೀತಿ, ಭರವಸೆ ತುಂಬಿದೆ. ಇಂದಿನಿಂದ ಶಾಶ್ವತವಾಗಿ ಸೋನಾಕ್ಷಿ ಜಹೀರ್ 23.06.2024.” ಎಂದು ನಟಿ ಸೋನಾಕ್ಷಿ ಸೋಶಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.
‘ಎರಡು ಕುಟುಂಬದವರ ಮತ್ತು ದೇವರ ಆಶೀರ್ವಾದದಿಂದ ನಾವು ಇಂದು ಸತಿ-ಪತಿ ಆಗಿದ್ದೇವೆ’ ಎಂದು ಬರೆದುಕೊಳ್ಳುವ ಮೂಲಕ ಸೋನಾಕ್ಷಿ ಸಿನ್ಹಾ ಮತ್ತು ಝಹೀರ್ ಇಖ್ಬಾಲ್ ಅವರು ತಮ್ಮ ಮದುವೆಯ ಸಿಹಿ ಸುದ್ದಿಯನ್ನು ಫೋಟೋ ಸಮೇತ ನೀಡಿದ್ದಾರೆ.
ಸೋನಾಕ್ಷಿ ಆಫ್ ವೈಟ್ ಸೀರೆ ಮತ್ತು ಸಿಂಪಲ್ ಆಭರಣದಲ್ಲಿ ಸುಂದರವಾಗಿ ಕಾಣುತ್ತಿದ್ದರು. ತನ್ನ ಕೂದಲಿನ ಬನ್ಗೆ ವೈಟ್ ರೋಸ್ ನಿಂದ ಅಲಂಕರಿಸಿದ್ರು. ಜಹೀರ್ ಬಿಳಿ ಕುರ್ತಾದಲ್ಲಿ ಮಿಂಚುತ್ತಿದ್ರು. ಸೋನಾಕ್ಷಿ ಮತ್ತು ಜಹೀರ್ ಮುಖದಲ್ಲಿ ಮದುವೆಯ ಸಂಭ್ರಮ ಎದ್ದು ಕಾಣ್ತಿತ್ತು. ಸೋನಾಕ್ಷಿ ಸಿನ್ಹಾ ತನ್ನ ತಂದೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದನ್ನು ಫೋಟೋದಲ್ಲಿ ಕಾಣಬಹುದಾಗಿದೆ.
ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಇಂದು ಜೂನ್ 23 ರಂದು ಮುಂಬೈನಲ್ಲಿ ವಿವಾಹವಾದ್ರು. ಅವರಿಬ್ಬರೂ ಹಿಂದೂ ಅಥವಾ ಮುಸ್ಲಿಂ, ಯಾವ ಸಂಪ್ರದಾಯಗಳಲ್ಲಿ ಮದುವೆ ಆಗ್ತಾರೆ ಎನ್ನುವ ಚರ್ಚೆ ಜೋರಾಗಿತ್ತು. ಎರಡೂ ಧರ್ಮಗಳನ್ನು ಆಯ್ಕೆ ಮಾಡಿಕೊಳ್ಳದ ಇಬ್ಬರೂ ನಾಗರಿಕ ವಿವಾಹದ ಮೂಲಕ ಸತಿ, ಪತಿಗಳಾದ್ರು.
ಅಂತರ್ಧರ್ಮೀಯ ವಿವಾಹ ಆದ್ದರಿಂದ ಆರಂಭದಲ್ಲಿ ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾಗೆ ಇಷ್ಟ ಇರಲಿಲ್ಲ ಎಂದು ಗಾಸಿಪ್ ಹಬ್ಬಿತ್ತು. ನಂತರದ ದಿನಗಳಲ್ಲಿ ಅವರು ಆ ಮಾತನ್ನು ತಳ್ಳಿ ಹಾಕಿದ್ದರು. ಇಂದು ಶತ್ರುಘ್ನ ಸಿನ್ಹಾ ಅವರು ಖುಷಿಯಿಂದಲೇ ಪಾಲ್ಗೊಂಡಿದ್ದಾರೆ.