ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಹಾಗೂ ದರ್ಶನ್ ಬಂಧನದ ಕುರಿತು ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ದರ್ಶನ್ ಆಪ್ತ , ನಟ ಧರ್ಮ ಕೀರ್ತಿ ರಾಜ್ ಮಾತನಾಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಆರೋಪಿ ಸ್ಥಾನದಲ್ಲಿ ನೋಡಿ ಬೇಸರ ಆಗ್ತಿದೆ. ದರ್ಶನ್ ಅಂತಹ ವ್ಯಕ್ತಿ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದರ್ಶನ್ ನಮ್ಮನ್ನೆಲ್ಲ ತಮ್ಮನಂತೆ ನೋಡಿಕೊಳ್ತಿದ್ದರು. ಈ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿದ್ದಾರಾ..? ಇಲ್ವಾ ಅಂತ ನ್ಯಾಯಾಲಯ ಹೇಳಬೇಕು. ದರ್ಶನ್ ನೋಡೋಕೆ ಜೈಲಿಗೆ ಹೋಗ್ತೀನಿ ಎಂದಿದ್ದಾರೆ.
ಚಿತ್ರರಂಗಕ್ಕೆ ಬರೋಕೆ ಮುಂಚೆನೇ ನಾನು ಅವರ ದೊಡ್ಡ ಫ್ಯಾನ್. ಅವರ ಮನೆಯಲ್ಲಿ ಊಟ ಮಾಡಿದ್ದೀನಿ. ವಿಜಯಕ್ಕ ತಮ್ಮ ಕೈಯಿಂದ ನನಗೆ ಹೊಟ್ಟೆ ತುಂಬಾ ಊಟ ಕೊಟ್ಟಿದ್ದಾರೆ. ಇದೆಲ್ಲ ಆಗಬಾರದಿತ್ತು. ಈಗ ನೋಡಿದರೆ ನೋವಾಗುತ್ತೆ. ಎಲ್ಲ ಚೆನ್ನಾಗಿದ್ದರು. ಪೊಲೀಸರು ಅವರ ಕೆಲಸ ಮಾಡಿದ್ದಾರೆ. ಕೇಸ್ ಕೋರ್ಟ್ನಲ್ಲಿದೆ. ಇದು ಆಗಿರೋದು ಆಕಸ್ಮಿಕವಾಗಿ ಆಗಿರುತ್ತೆ. ರೇಣುಕಾಸ್ವಾಮಿ ಕುಟುಂಬಕ್ಕೆ ಭಗವಂತ ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದು ಧರ್ಮ ಕೀರ್ತಿ ರಾಜ್ ಹೇಳಿದ್ದಾರೆ.