ಸಚಿವ ರಾಜಣ್ಣ ಹೈಕಮಾಂಡ್ ಬಳಿ ಸಿಎಂ ಹುದ್ದೆಯೇ ಕೇಳಿಲಿ. ಬೇಡ ಅಂದೋರು ಯಾರು ಎಂದು ಸಚಿವ ರಾಜಣ್ಣ ಡಿಸಿಎಂ ಹುದ್ದೆ ಪ್ರಸ್ತಾಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಮೂರು ಡಿಸಿಎಂ ಹುದ್ದೆ ಪ್ರಸ್ತಾಪ ಮಾಡಿದ್ದ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೂರು ಡಿಸಿಎಂ ಹುದ್ದೆ ಸೃಷ್ಟಿ ಅದು ರಾಜಣ್ಣ ಅವರ ವೈಯಕ್ತಿಕ ವಿಚಾರ.
ಎಲ್ಲರಿಗೂ ಕೇಳೋಕೆ ಹಕ್ಕಿದೆ. ಹೈಕಮಾಂಡ್ ಬಳಿ ಹೋಗಿ ಕೇಳಲಿ. ಯಾರು ಬೇಡ ಅಂದಿಲ್ಲ. ಡಿಸಿಎಂ ಮಾಡುವುದರಿಂದಲೇ ಎಲ್ಲಾ ಆಗುತ್ತೆ ಅನ್ನೋದಾದರೆ ಸಿಎಂನ ಮಾತ್ರ ಬಿಟ್ಟು ಇಡೀ ಕ್ಯಾಬಿನೆಟ್ ಡಿಸಿಎಂ ಆಗಲಿ, ಆಗುತ್ತಾ? ಎಂದು ಪ್ರಶ್ನಿಸಿದರು.ನಮ್ಮ ಕೆಲಸ ಏನು? ಚುನಾವಣೆಯಲ್ಲಿ ನಾಲ್ಕೈದು ಸ್ಥಾನ ಕಡಿಮೆ ಬಂದಿದೆ.
ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಡಿಸಿಎಂ ಹುದ್ದೆ ಯಾಕೆ, ಸಿಎಂ ಹುದ್ದೆನೂ ಹೈಕಮಾಂಡ್ ಬಳಿ ಹೋಗಿ ಕೇಳಲಿ ಯಾರು ಬೇಡ ಅಂದೋರು. ಮಾಧ್ಯಮಗಳ ಬಳಿ ಕೇಳಿದರೆ ಆಗುತ್ತಾ ಎಂದು ಹರಿಹಾಯ್ದರು