ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಶಾಸಕರಾಗಿರುವ ಪ್ರೀತಂ ಗೌಡಗೆ ಎಸ್ಐಟಿ ಅಧಿಕಾರಿಗಳು ನೊಟೀಸ್ ನೀಡುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಪೆನ್ಡ್ರೈವ್ ಖರೀದಿ ಮಾಡಿಸಿದ್ದು ಪ್ರೀತಂ ಗೌಡ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರೀತಂಗೌಡ ವಿರುದ್ಧ ಸಿಐಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತೆಯಿಂದ ಪ್ರಜ್ವಲ್ ಲೈಂಗಿಕ ದೌರ್ಜನ್ಯ ಎಸಗಿರುವ ವೀಡಿಯೋ ಮಾಡಿ ಶೇರ್ ಮಾಡಿರುವ ಆರೋಪ ಶಾಸಕರ ಮೇಲಿದೆ. ಹೀಗಾಗಿ ಪ್ರಜ್ವಲ್ ಜೊತೆಗೆ ಹಾಸನ ಮಾಜಿ ಶಾಸಕ ಪ್ರೀತಂ ಗೌಡ, ಚೇತನ್ ಹಾಗೂ ಕ್ವಾಲಿಟಿ ಬಾರ್ ಶರತ್ ವಿರುದ್ಧ ಕೂಡ ಕಳೆದ ವಾರ ಐಪಿಸಿ ಸೆಕ್ಷನ್ 354 (ಮಹಿಳೆಯ ಮೇಲಿನ ದೌರ್ಜನ್ಯ) , ಐಟಿ ಆಕ್ಟ್ 66ಇ ಅಡಿ ಪ್ರಕರಣ ದಾಖಲುವಿಡೀಯೋ ಹಂಚಿಕೆ ಸಂಬಂಧ ದಾಖಲಾಗಿರುವ ಎಫ್ ಐ ಆರ್ ನಲ್ಲಿ ಪ್ರೀತಮ್ ಗೌಡ ನಾಲ್ಕನೆ ಆರೋಪಿಯಾಗಿದ್ದಾರೆ. ಹೀಗಾಗಿ ಯಾವುದೇ ಕ್ಷಣದಲ್ಲಾದರೂ ಮಾಜಿ ಶಾಸಕ ಪ್ರೀತಂ ಗೌಡಗೆ ಎಸ್ಐಟಿ ನೊಟೀಸ್ ನೀಡುವ ಸಾಧ್ಯತೆಗಳಿವೆ. ಬಳಿಕ 66ಇ ಸೆಕ್ಷನ್ (ಗೌಪ್ಯತೆಯ ಉಲ್ಲಂಘನೆ) ಅಡಿ ಬಂಧನ ಮಾಡಿ ವಿಚಾರಣೆ ಮಾಡುವ ಸಾಧ್ಯತೆಗಳಿವೆ.