ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಮತ್ತೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ.
ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಯೂರಾಲಜಿಸ್ಟ್, ಫೊರೆನ್ಸಿಕ್ ತಜ್ಷರು ಮತ್ತು ಪಿಜಿಷಿಯನ್ ವೈದ್ಯರಿಂದ ವಿವಿಧ ಮಾದರಿಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಿದ್ದಾರೆ. ಇದೇ ವೇಳೆ ಸಂತ್ರಸ್ತನಿಗೆ ಮನೋ ವೈದ್ಯರಿಂದ ಎಗ್ಸಾಮಿನೇಷನ್ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಸೂರಜ್ರೇವಣ್ಣಗೆಯಾವರೀತಿಮೆಡಿಕಲ್ಟೆಸ್ಟ್ಆಗಲಿದೆ ?
- ಕೂದಲು ಪರೀಕ್ಷೆಗೆ ಒಳಪಡಿಸಲು ಸಿದ್ಧತೆ
- ಲಿಂಗತ್ವ ಪರೀಕ್ಷೆ ಸಾಧ್ಯತೆ
- ಅಸಹಜ ಲೈಂಗಿಕ ಕ್ರಿಯೆಗೆ ಸಮರ್ಥನ ಅಥವಾ ಈ ರೀತಿಯ ಅ ಸಹಜ ಲೈಂಗಿಕ ಕ್ರಿಯೆ ಇದೇ ಮೊದಲ ಅಂತಾ ಪರೀಕ್ಷೆ ಮಾಡ್ತಾರೆ
- ಕಿಡ್ನಿ ಮತ್ತು ವೃಷಣಗಳ ಪರೀಕ್ಷೆಯೂ ಸಾಧ್ಯತೆ
- ಲೈಂಗಿಕ ಸಮರ್ಥತೆ ಬಗ್ಗೆ ಪರೀಕ್ಷೆ
- ಫೊರೆನ್ಸಿಕ್ ಫಾರೆನ್ಸಿಕ್ ತಙ್ಞರಿಂದ ಕೂದಲು, ಬಟ್ಟೆ ಮತ್ತು ಕೆಲವೊಂದು ವಸ್ತುಗಳನ್ನ ಪರೀಕ್ಷೆಗೆ ಒಳಪಡಿಸ್ತಾರೆ
- ಡಿಎನ್ಎ ಟೆಸ್ಟ್ ಕೂಡ ಮಾಡಲಿದ್ದಾರೆ
- ಡಿಎನ್ಎ ಸೇರಿದಂತೆ 8 ಬಗೆಯ ಮೆಡಿಕಲ್ ಟೆಸ್ಟ್ ಮಾಡುವ ಸಾಧ್ಯತೆ
ಸೂರಜ್ಮೊಬೈಲ್ಸೀಜ್:
ಸದ್ಯ ಹೊಳೆನರಸೀಪುರ ಪೊಲೀಸರಿಂದ ಕೇಸ್ ದಾಖಲೆ ಪಡೆದು ತನಿಖೆ ಆರಂಭಿಸಿರುವ ಸಿಐಡಿ ತಂಡ ಆರೋಪಿ ಮೊಬೈಲ್ ಸೀಜ್ ಮಾಡಿದೆ. ಸೂರಜ್ ಹಾಗೂ ಸಂತ್ರಸ್ತನ ನಡುವೆ ನಡೆದಿರುವ ಚಾಟಿಂಗ್ ಹಾಗೂ ಫೋನ್ ಸಂಭಾಷಣೆ ಮಾಹಿತಿ ಕಲೆಹಾಕಿದ್ದು, ತನಿಖೆ ಮುಂದುವರಿಸಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.