ರಾಕಿಂಗ್ ಸ್ಟಾರ್ ಯಶ್ ನಟನೆಯ ಕಿರಾತಕ ಸಿನಿಮಾದಲ್ಲಿ ನಟಿಸಿದ್ದ ನಟಿ ಓವಿಯಾ ಪತ್ತೆ ಇಲ್ಲದಂತಾಗಿದ್ದಾರೆ. ಈಕೆಗೆ ಚಿತ್ರರಂಗದಲ್ಲಿ ಡಿಮ್ಯಾಂಡ್ ಕಮ್ಮಿಯಾಗಿದೆ. ಆದರೆ ತಮ್ಮ ವಿವಾದಿತ ಸ್ಟೇಟ್ ಮೆಂಟ್ ಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ಓವಿಯಾ ತಮ್ಮ ರಿಲೇಷನ್ಶಿಪ್, ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ.
ಪ್ರೀತಿಯಲ್ಲಿ ಬಿದ್ದು ಮೋಸ ಹೋಗ್ತಾರೆ. ನಾನು ಕೂಡ ಈ ಮೊದಲು ರಿಲೇಷನ್ಶಿಪ್ನಲ್ಲಿದ್ದೆ. ಅದ್ಯಾವುದೂ ಕೈಗೂಡಲಿಲ್ಲ. ಕೆಲವರು ಹಣಕ್ಕಾಗಿ ಮೋಸ ಮಾಡುತ್ತಾರೆ. ಇನ್ಮುಂದೆ ಲಿವಿಂಗ್ ಟುಗೆದರ್ ಸಂಬಂಧವನ್ನು ನಾನು ನಂಬುವುದಿಲ್ಲ. ನಿಮಗೆ ಅನಿಸಿದನ್ನು ನೀವು ಮಾಡಿ ಎಂದಿದ್ದಾರೆ. ಪರ್ಸನಲ್ ವಿಚಾರಕ್ಕೆ ನಾವೆಂದೂ ತೊಂದರೆ ಕೊಡಬಾರದು ಎಂದು ಓವಿಯಾ ಹೇಳಿದ್ದಾರೆ.
ತಮಿಳಿನ ವಿಜಯ್ ಚಾನೆಲ್ನಲ್ಲಿ ಪ್ರಸಾರವಾದ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ಈ ಬಹುಭಾಷಾ ನಟಿ ತಮ್ಮ ಸ್ಪೆಷಲ್ ಮ್ಯಾನರಿಸಂನಿಂದ ಹೆಸರು ಮಾಡಿದ್ದರು. ಅಷ್ಟೇ ಅಲ್ಲ ಸಹ ಸ್ಪರ್ಧಿ ಆರವ್ ಜೊತೆಗಿನ ಸಂಬಂಧದ ಕಾರಣವೂ ಚರ್ಚೆಗೆ ಗ್ರಾಸಿವಾಗಿದ್ದಲ್ಲೇ, ಒಂದು ಸಂದರ್ಭದಲ್ಲಿ ಆತ್ಮಹತ್ಯೆಗೂ ಯತ್ನಿಸಿದ್ದರೆಂಬ ಸುದ್ದಿ ಹರಿದಾಡಿತ್ತು.
ಬಿಗ್ಬಾಸ್ನಲ್ಲಿ ವೀಕ್ಷಕರ ಸಪೋರ್ಟ್ ಇದ್ದರೂ, ರಿಯಾಲಿಟಿ ಶೋನಿಂದ ತಾವಾಗಿಯೇ ಹೊರಬಂದು ಬಿಟ್ಟರು. ಶೋ ಮುಗಿದ ಬಳಿಕೆ ಕೆಲವು ದಿನ ಮತ್ತೆ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಬರ ಬರುತ್ತಾ ಮತ್ತೆ ಅವಕಾಶಗಳು ಕುಂಠಿತವಾದವು.
ಕನ್ನಡದ ಕಿರಾತಕ, ಮಿಸ್ಟರ್ ಮೊಮ್ಮಗ ಸಿನಿಮಾದಲ್ಲಿ ಓವಿಯಾ ನಟಿಸಿದ್ದಾರೆ. ತಮಿಳಿನಲ್ಲಿ ಕಲಾವಾಣಿ, ಮರೀನಾ, 90 ಎಂಎಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಹೊಸ ಸಿನಿಮಾ ಅವಕಾಶಗಳಿಗಾಗಿ ಕಾಯ್ತಿದ್ದಾರೆ.