ಕೀನ್ಯಾ ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಕನಿಷ್ಠ ಐವರು ಪ್ರತಿಭಟನಾಕಾರರು ಸಾವಿಗೀಡಾಗಿದ್ದಾರೆ. ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವಿನ ಸಂಘರ್ಷದಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ. ಪರಿಸ್ಥಿತಿ ಉಲ್ಬಣಗೊಂಡಿದೆ.
ತೆರಿಗೆ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನಾಕಾರರು ಸಂಸತ್ತಿನ ಆವರಣಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಈ ವೇಳೆ ತಡೆಯಲು ಬಂದ ಪೊಲೀಸರನ್ನೇ ಪ್ರತಿಭಟನಾಕಾರರು ಓಡಿಸಿದ್ದಾರೆ. ಬಳಿಕ ಸಂಸತ್ ಕಟ್ಟಡದ ಒಳಗಿನಿಂದ ಬೆಂಕಿ ಹೊತ್ತಿ ಉರಿದಿದ್ದು, ಕಟ್ಟಡದ ವಿಭಾಗಗಳು ಸುಟ್ಟುಹೋಗಿವೆ. ಅಶ್ರುವಾಯು ಮತ್ತು ಜಲ ಫಿರಂಗಿ ಬಳಸಿ ಜನರನ್ನು ಚದುರಿಸಲು ವಿಫಲವಾದ ನಂತರ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಭದ್ರತಾ ಪಡೆ ಹಾಗೂ ಹೋರಾಟಗಾರರ ನಡುವೆ ನಡೆದ ಸಂಘರ್ಷದಲ್ಲಿ5 ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೀನ್ಯಾ ಸಂಸತ್ನಲ್ಲಿಹೊಸ ತೆರಿಗೆ ವಿಧಿಸುವ ಹಣಕಾಸು ವಿಧೇಯಕ ಅಂಗೀಕಾರಗೊಂಡಿತ್ತು. ಆರ್ಥಿಕ ಸಂಪನ್ಮೂಲ ಹೆಚ್ಚಿಸುವ ಸಲುವಾಗಿ ಪರಿಸರ ಸುಂಕ ವಿಧಿಸಲು ವಿಧೇಯಕದಲ್ಲಿಅವಕಾಶ ಮಾಡಿಕೊಡಲಾಗಿದೆ. ಹೊಸ ತೆರಿಗೆಯಿಂದ ನೈರ್ಮಲ್ಯ ನಿಯಂತ್ರಣ ಟವೆಲ್, ಡೈಪರ್ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಹೀಗಾಗಿ ಜನರು ತೆರಿಗೆಯ ಹೊರೆಯನ್ನು ಖಂಡಿಸಿ ಹೋರಾಟಕ್ಕೆ ಇಳಿದಿದ್ದಾರೆ. ಕೋವಿಡ್ ಬಳಿಕ ಕೀನ್ಯಾ ಆರ್ಥಿಕವಾಗಿ ಹಿಂದುಳಿದಿದೆ.