ಸಸಿಗಳನ್ನು ನೆಡುವುದು ಅಷ್ಟೇ ಅಲ್ಲದೇ ಅವುಗಳ ರಕ್ಷಣೆ ಮಾಡಲು ಕ್ರಮಕೈಗೊಳ್ಳಲು ಜನಪ್ರತಿನಿಧಿಗಳು, ಅಧಿಕಾರಿಗಳ ವರ್ಗದವರು ಚರ್ಚೆ ಮಾಡಿದ್ದೇವೆ.
ಎಲ್ಲ ಕಡೆ ವೃಕ್ಷವನ್ನು ನೆಡಬೇಕು.ಇಡೀ ವಿಶ್ವವೇ ತಾಪಮಾನದಿಂದ ತತ್ತರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ತಾಪಮಾನವನ್ನು ಕಡಿಮೆ ಮಾಡಿಕೊಳ್ಳಲು ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಬಾಗಲಕೋಟೆಯ ಗುರುಬಸವ ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ಜಿಲ್ಲೆಯಾದ್ಯಂತ ಲಕ್ಷ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಎಲ್ಲರೂ ಅರಣ್ಯೀಕರಣದತ್ತ ಪ್ರಯತ್ನ ಮಾಡಲು ಸರಿಯಾದ ಕ್ರಮದಲ್ಲಿ ಆಗದೇ ವಿಫಲರಾಗಿದ್ದೇವೆ.ಆದ್ದರಿಂದ ಈಗ ಗಿಡಮರಗಳನ್ನು ಬೆಳೆಸಿ ಮುಂದಿನ ಪೀಳಿಗೆಗೆ ಸಹಾಯಕಾರಿಯಾಗಬೇಕು ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲಾದ್ಯಂತ ಎಲ್ಲರೂ ಕೈಜೋಡಿಸಿಕೊಂಡು ಗಿಡಮರಗಳನ್ನು ನೆಡುವುದರ ಜತೆಗೆ ಪೋಷಿಸುವ ಕಾರ್ಯಮಾಡೋಣ ಎಂದು ತಿಳಿಸಿದರು.
ಕ್ರಿಯಾಶೀಲ ಶಾಸಕರಿಗೆ ಮಂತ್ರಿ ಸ್ಥಾನ ನೀಡಿ* ;ಸುಬ್ಬಾರರೆಡ್ಡಿ ಹೇಳಿಕೆಗೆ ಆರ್ ಬಿ.ತಿಮ್ಮಾಪುರ ಪ್ರತಿಕ್ರಿಯೆ ಎಐಸಿಸಿ ಮನಸಿನಲ್ಲಿ ಏನಿದೆ ನಿಮಗೆ ಗೊತ್ತಾ?ಅವರು ಏನು ತೀರ್ಮಾಣ ತೆಗೆದುಕೊಳ್ಳುತ್ತಾರೆ ನೋಡೋಣ.