ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಚುರುಕು ಪಡೆದುಕೊಂಡಿದ್ದು, ಕೆಆರ್ಎಸ್ ಡ್ಯಾಂ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಎರಡು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆಯಾಗುತ್ತಿದೆ. ಸ್ವಲ್ಪ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ಹೀಗಾಗಿ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಕೆಆರ್ಎಸ್ ಡ್ಯಾಂ ಒಳಹರಿವಿನ ಪ್ರಮಾಣ 2,241 ಕ್ಯೂಸೆಕ್ ಇದೆ. ನಿನ್ನೆಗಿಂತ ಇಂದು ಒಳಹರಿವಿನಲ್ಲಿ 1,000 ಕ್ಯೂಸೆಕ್ ಹೆಚ್ಚಳವಾಗಿದೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 87.90 ಅಡಿ ನೀರಿದೆ. 49.452 ಟಿಎಂಸಿ ಗರಿಷ್ಠ ಸಾಮಾರ್ಥ್ಯದ ಕೆಆರ್ಎಸ್ನಲ್ಲಿ 14.724 ಟಿಎಂಸಿ ನೀರು ಸಂಗ್ರಹವಾಗಿದೆ. ಕೆಆರ್ಎಸ್ ಡ್ಯಾಂನ ಒಳಹರಿವು 2,241 ಕ್ಯೂಸೆಕ್ ಹಾಗೂ ಡ್ಯಾಂನ ಹೊರ ಹರಿವು 986 ಕ್ಯೂಸೆಕ್ ಇದೆ.