ಧಾರವಾಡ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಲು ತಂತ್ರಜ್ಞಾನದ ಜೊತೆಗೆ ಸಂವಹನ ಕೌಶಲ್ಯಗಳು ಅತ್ಯಗತ್ಯ ಎಂದು ಧಾರವಾಡ ಆಕಾಶವಾಣಿ ನಿವೃತ್ತ ನಿದೇರ್ಶಕರಾದ ಸಿ.ಯು.ಬೆಳ್ಳಕ್ಕಿ ಹೇಳಿದರು.
ನಗರದ ಅಂಜುಮನ್ ಮಹಾವಿದ್ಯಾಲಯದಲ್ಲಿ ನಡೆದ ಹಿರಿಯ ನಾಗರಿಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಹನ ಕೌಶಲ್ಯಗಳು ಪ್ರತಿಯೊಬ್ಬ ಕೆಲಸ ಮಾಡುವ ವೃತ್ತಿಪರರಿಗೆ ಅತ್ಯಂತ ಪ್ರಮುಖವಾಗಿ ಬೇಕು ಎಂದರು.
ಪ್ರಸ್ತುತ ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆ ಗಳಿಸಿದ ಅಂಕಗಳಿಂದ ಅಳಿಯಲ್ಲ. ಬದಲಿಗೆ ಕೌಶಲ್ಯಗಳು ಮುಖ್ಯ. ಪದವಿ ಪ್ರಮಾಣ ಪತ್ರಕ್ಕೆ ಮಾತ್ರವೇ ಸೀಮಿತ.
ಹೀಗಾಗಿ ಕೌಶಲ್ಯ ಮೈಗೂಡಿಸಿಕೊಂಡು, ದೇಶ ಕಟ್ಟುವ ಕೈಂಕರ್ಯಕ್ಕೆ ಕರೆ ನೀಡಿದರು.
ವಿದ್ಯಾರ್ಥಿಗಳಿಗೆ ಖಾಸಗಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಜಾಗತೀಕರಣ ಹಾಗೂ ಖಾಸಗೀಕರಣ ಪ್ರಯುಕ್ತ ಉದ್ಯೋಗ ಕ್ಷೇತ್ರದಲ್ಲಿ ಹೇರಳ ಅವಕಾಶ ಸೃಷ್ಠಿಯಾಗಲಿವೆ. ಅದಕ್ಕೆ ತಕ್ಕಂತೆ ಕೌಶಲ್ಯ ಹೊಂದಬೇಕು ಎಂದು ಸಲಹೆ ನೀಡಿದರು.
ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಸಿ.ಆರ್.ಪಾಟೀಲ, ಇಂದಿನ ಸ್ಪರ್ಧಾತ್ಮ ಜಗತ್ತಿನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ತಾಂತ್ರಿಕ ಜ್ಞಾನದ ಜೊತೆ ವಿವಿಧ ವೃತ್ತಿಪರ ಹಾಗೂ ಸಂವಹನ ಕೌಶಲ್ಯ ಬೆಳೆಸಿಕೊಳ್ಳುವಂತೆ ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಡಾ.ಮಾಜಿನ್ ಮುಲ್ಲಾ ಮಾತನಾಡಿ, ಭಾರತ ದೇಶದಲ್ಲಿ ಅವಿಭಕ್ತ ಕುಟುಂಬದಲ್ಲಿ ಭಾವನಾತ್ಮಕ ಸಂಬAಧ ಕಟ್ಟಿಯಾಗಿದ್ದವು.
ಆಧುನಿಕ ಯುಗದಲ್ಲಿ ಭಾವನಾತ್ಮಕ ಸಂಬಧ ನಶಿಸುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಈಚೇಗೆ ಅಗಲಿದ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಉರ್ದು ಕವಿ ಖಾಲಿದ್ ಅಹ್ಮದ್ ಅವರಿಗೆ ಎರಡು ನಿಮಿಷ ಮೌನಚಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎನ್.ಎಂ.ಮಕಾನದಾರ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಎಸ್.ಎಸ್.ಅದೋನಿ, ಸಮಾಜಶಾಸ್ತç ವಿಭಾಗದ ಮುಖ್ಯಸ್ಥೆ ಸಮೀನಾ ನದಾಫ್, ಡಾ.ಆಸ್ಮಾ ಬಳ್ಳಾರಿ ಮತ್ತು ಡಾ.ಐ.ಎ.ಮುಲ್ಲಾ ಪಾಲ್ಗೊಂಡಿದ್ದರು