ಚನ್ನಪಟ್ಟಣದ ಉಪಚುನಾವಣೆಯಲ್ಲಿ ಡಿಕೆ ಬ್ರದರ್ಸ್ ಪೈಕಿ ಯಾರೇ ಸ್ಪರ್ಧಿಸಿದರೂ ಸೋಲಿಸುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ಗೆ ಸವಾಲು ಹಾಕಿದ್ದಾರೆ. ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುವ ವೇಳೆ, ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಈ ವೇಳೆ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಯಾರು ಅನ್ನೋದಕ್ಕಿಂತ ಒಂದೇ ಅಭ್ಯರ್ಥಿ. ಅದು ಬಿಜೆಪಿ ಆಗಬಹುದು ಅಥವಾ ಜೆಡಿಎಸ್ ಆಗಬಹುದು. ಕುಮಾರಸ್ವಾಮಿಯವರ ಜೊತೆ ಈಗಾಗಲೇ ಮಾತುಕತೆ ನಡೆಯುತ್ತಿದೆ.
ದೆಹಲಿಗೆ ಹೋದಾಗ ಮಾತುಕತೆ ಮಾಡಿದ್ದೇವೆ ಎಂದಿದ್ದಾರೆ. ಕುಮಾರಸ್ವಾಮಿಯವರು ಓಪನ್ ಮೈಂಡ್ನಲ್ಲಿ ಇದ್ದಾರೆ. ಅವರು ಹೇಳಿರೋದು ನಾವು ಗೆಲ್ಲಬೇಕು ಅಷ್ಟೇ. ಈ ದುಷ್ಟ ಸರ್ಕಾರ ಹಣದ ಹೊಳೆ ಚನ್ನಪಟ್ಟಣದಲ್ಲಿ ಹರಿಸುತ್ತಾರೆ. ಹೊಳೆ ಹರಿಸೋದನ್ನ ತಡೆದುಗೆಲ್ಲುವ, ಯಾರೇ ಅಭ್ಯರ್ಥಿ ಆದರೂ ಅವರನ್ನು ಆಯ್ಕೆ ಮಾಡೋಣ ಎಂದಿದ್ದಾರೆ. ನಾವು ಹಾಗೂ ಅವರು ಅಭ್ಯರ್ಥಿಯ ವಿಚಾರದಲ್ಲಿ ಮುಕ್ತವಾಗಿ ಇದ್ದೇವೆ ಎಂದು ಅವರು ತಿಳಿಸಿದ್ದಾರೆ
20 ವರ್ಷಗಳಿಂದ ಚನ್ನಪಟ್ಟಣಕ್ಕೆ ಅವರು ಹೋಗೇ ಇಲ್ಲ. ಈಗ ನಾಟಕ ಮಾಡ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಂದಿದ್ದು 20 ಸಾವಿರ ಮತ. ಬಿಜೆಪಿ-ಜೆಡಿಎಸ್ಗೆ ಒಂದು ಲಕ್ಷದ ಮೇಲೆ ಮತಗಳು ಬಂದಿತ್ತು. 20 ಸಾವಿರ ಮತ ಬಂದಿರೋದಕ್ಕೆ ಅಲ್ಲಿಗೆ ಹೋಗ್ತಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳ್ತಾರೆ. 20 ಸಾವಿರ ಮತ ಹಾಕೋರಿಗೆ ನಮಸ್ಕಾರ ಹಾಕೋಕೆ ಹೋಗ್ತಾರಂತೆ.
ಹಾಕಲಿ ಎಷ್ಟು ನಮಸ್ಕಾರ ಹಾಕ್ತಾರೆ ಅಂತ. ಬೆಲೆ ಏರಿಕೆ ಮಾಡಿರೋದ್ರಿಂದ ಈ ಬೈ ಎಲೆಕ್ಷನ್ನಲ್ಲಿ ಜನ ಇವರಿಗೆ 3 ನಾಮ ಹಾಕಬೇಕು. ಈ ಮೂರು ಬೈ ಎಲೆಕ್ಷನ್ನಲ್ಲಿ ಜನ ಕಾಂಗ್ರೆಸ್ಗೆ ಮೂರು ನಾಮ ಹಾಕಿದ್ರೆ ಬೆಲೆಗಳೆಲ್ಲ ಇಳಿದು ಹೋಗುತ್ತೆ. ರಾಜ್ಯದ ಜನರಿಗೆ ಮನವಿ ಮಾಡ್ತೀನಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಿ ಬೆಲೆ ಇಳಿಕೆ ಆಗುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.