ಹಾಲಿನಿಂದ ಮಾಡುವ ಉತ್ಪನ್ನಗಳಾದ ಸಿಹಿ ತಿಂಡಿಗಳು, ಐಸ್ ಕ್ರೀಂ ಹಾಗೂ ಮಿಲ್ಕ್ ಶೇಕ್ ದರ ಹೆಚ್ಚಳ ಮಾಡಲು ಮಾಲೀಕರು ಮುಂದಾಗಿದ್ದಾರೆ.
ಪ್ರತಿ ಲೀಟರ್ ಐಸ್ ಕ್ರೀಂ ಬಾಕ್ಸ್ ಮೇಲೆ 10 ರಿಂದ 15 ರೂಪಾಯಿ ಹೆಚ್ಚಳವಾದರೆ, ಎಲ್ಲಾ ತರಹದ ಮಿಲ್ಕ್ ಶೇಕ್ ಗಳ ಮೇಲೆ 5 ರಿಂದ 10 ರೂಪಾಯಿ ಹೆಚ್ಚಳವಾಗಲಿದೆ.
ಹೋಟೆಲ್ ಮತ್ತು ಜ್ಯೂಸ್ ಶಾಪ್ಗಳಲ್ಲಿ ಮಾರಾಟ ಮಾಡುವ ಮಿಲ್ಕ್ ಶೇಕ್ ಮತ್ತು ಐಸ್ ಕ್ರೀಂಗಳಿಗೆ ಹಾಲು ಇಲ್ಲದೆ ತಯಾರಿಸಲು ಆಗುವುದಿಲ್ಲ. ಇದರಿಂದ ದರ ಏರಿಕೆ ಅನಿವಾರ್ಯ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಪ್ರತಿದಿನ ನಮ್ಮ ಹೋಟೆಲ್ನಲ್ಲಿ ಮಿಲ್ಕ್ ಶೇಕ್ ಗಾಗಿ 25 ಲೀಟರ್ ಹಾಲನ್ನು ತೆಗೆದುಕೊಳ್ಳುತ್ತೇವೆ. ಕಾಫಿ, ಚಹಾಗೆ 100 ಲೀಟರ್ ಹಾಲನ್ನು ತೆಗೆದುಕೊಳ್ಳುತ್ತೇವೆ. ಹಾಲಿನ ದರ ಹೆಚ್ಚಳ ಮಾಡಿರುವುದರಿಂದ ಆ ಹೊರೆಯನ್ನು ನಾವು ಹೊತ್ತುಕೊಳ್ಳುವುದಕ್ಕೆ ಆಗುವುದಿಲ್ಲ. ಅದರಿಂದ ನಾವು ಅದನ್ನು ಗ್ರಾಹಕರ ಮೇಲೆ ಹಾಕಲೇಬೇಕಾಗುತ್ತದೆ. 65 ರೂಪಾಯಿ ಇರುವ ಮಿಲ್ಕ್ ಶೇಕ್ ಅನ್ನು 70 ರೂಪಾಯಿ ಮಾಡುವ ಪರಿಸ್ಥಿತಿ ಬಂದಿದೆ
ಐಸ್ ಕ್ರೀಮ್ ಸದ್ಯ ನಾಲ್ಕು ಲೀಟರ್ ಗೆ 470 – 480 ರುಪಾಯಿ ಇತ್ತು. ಈಗ ಒಂದು ಲೀಟರ್ ಐಸ್ ಕ್ರೀಮ್ ಬಾಕ್ಸ್ ನ ಮೇಲೆ 10 ರಿಂದ 12 ರುಪಾಯಿ ಹೆಚ್ಚಳ ಮಾಡಲು ಮುಂದಾಗಿದೆ ಎಂದು ಹೋಟೆಲ್ ಮಾಲೀಕ ಸಂಘದ ಚಂದ್ರಶೇಖರ್ ಶೆಟ್ಟಿ ಹೇಳಿದ್ದಾರೆ.
ಪೀಸ್ತಾ ರೋಲ್, ಮಿಲ್ಕ್ ಕೇಕ್, ಮಿಲ್ಕ್ ಬರ್ಫಿ, ದೂದ್ ಪೇಡ ಹಾಗೂ ಧಾರವಾಡ ಪೇಡ ಸದ್ಯ ಕೆಜಿ ಗೆ 400 ರೂಪಾಯಿ ಇದ್ದು ಹಾಲಿನ ಬೆಲೆ ಹೆಚ್ಚಳದಿಂದ 20 ರಿಂದ 25 ರಿಂದ ರೂಪಾಯಿ ಹೆಚ್ಚಳವಾಗಲಿದೆಹಾಲಿನ ದಾರ ಎಲ್ಲಿ ಹೆಚ್ಚಾಗಿದೆ.ಕ್ವಾಂಟಿಟಿ ಜಾಸ್ತಿ ಮಾಡಿದ್ದಾರೆ.ಅದರಂತೆ ನಿಮ್ಮ ಉತ್ಪನ್ನವೂ ಜಾಸ್ತಿಯಾಗುತ್ತದಲ್ಲ.ಈ ನೆಪದಿಂದ ದರ ಹೆಚ್ಚಳ ಸರಿಯಲ್ಲ.ದರ ಹೆಚ್ಚಾದರೆ ವ್ಯಾಪಾರ ಕಡಿಮೆಯಾಗುತ್ತದೆ.ನಿಮ್ಮ ಮಾಲು ಸ್ಟಾಕು ಉಳಿಯುತ್ತದೆ.ಸ್ವಲ್ಪೇ ದಿನಗಳಲ್ಲಿ ಆ ಪ್ರೊಡಕ್ಷನ್