ಕಳೆದ ಕೆಲ ದಿನಗಳಿಂದ ಹೊಸ ತೆರಿಗೆ ಹಾಗೂ ವಿವಾದಾತ್ಮಕ ಹಣಕಾಸು ಮಸೂದೆ ವಿರೋಧಿಸಿ ಕಿನ್ಯಾದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಏಕಾಏಕಿ ಪ್ರತಿಭಟನಾಕಾರರು ಸಂಸತ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಯಲ್ಲಿ 22 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದರು. ಕೊನೆಗೂ ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಸರ್ಕಾರ ತೆರಿಗೆ ಹೆಚ್ಚಳ ಯೋಜನೆ ಸ್ಥಗಿತಗೊಳಿಸಿದೆ.
ದೇಶಾದ್ಯಂತ ನಡೆದ ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ವಿವಾದಾತ್ಮಕ ತೆರಿಗೆ ಹೆಚ್ಚಳ ಮಸೂದೆಯನ್ನು ವಾಪಾಸು ಪಡೆಯುವುದಾಗಿ ಕೆನ್ಯಾದ ಅಧ್ಯಕ್ಷ ವಿಲಿಯಂ ರೂಟೊ ಹೇಳಿದ್ದಾರೆ.
ತೆರಿಗೆ ಹೆಚ್ಚಳ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸಂಸತ್ಗೆ ಬೆಂಕಿ ಹಚ್ಚಲಾಗಿತ್ತು. ಬುಧವಾರ ದೇಶವನ್ನುದ್ದೇಶಿಸಿ ಮಾತನಾಡಿದ ರೂಟೊ `ಕಿನ್ಯಾ ಜನತೆಗೆ ಈ ಮಸೂದೆ ಒಪ್ಪಿಗೆಯಿಲ್ಲ ಎಂಬುದು ಸ್ಪಷ್ಟವಾಗಿದೆ. ಇದನ್ನು ನಾನು ಒಪ್ಪಿಕೊಂಡಿದ್ದು ಮಸೂದೆಗೆ ಸಹಿ ಹಾಕುವುದಿಲ್ಲ ಮತ್ತು ಅದು ಈಗ ಕಾನೂನಿನ ರೂಪ ಪಡೆಯುವುದಿಲ್ಲ. ಮಸೂದೆಯ ಬಗ್ಗೆ ಯುವಜನತೆಯೊಂದಿಗೆ ಸಂವಾದ ನಡೆಸಲಾಗುವುದು ‘ ಎಂದು ಹೇಳಿದ್ದಾರೆ.
ತೆರಿಗೆ ಹೆಚ್ಚಳ ಮಸೂದೆ ವಿರೋಧಿಸಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಕನಿಷ್ಟ 22 ಮಂದಿ ಮೃತಪಟ್ಟಿರುವುದಾಗಿ ಕೆನ್ಯಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವರದಿ ಮಾಡಿತ್ತು.