ಕೊಹ್ಲಿ, ಧೋನಿ ಬಳಿಕ ನಾಯಕನಾಗಿ ರೋಹಿತ್ ಶರ್ಮಾ ವಿಶೇಷ ದಾಖಲೆ ಬರೆದಿದ್ದಾರೆ.
ಗುರುವಾರ ತಡರಾತ್ರಿ ಪ್ರೊವಿಡೆನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ, ರೋಹಿತ್ ಶರ್ಮ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 171 ರನ್ ಬಾರಿಸಿ ಸವಾಲೊಡ್ಡಿತು.
ಜವಾಬಿತ್ತ ಇಂಗ್ಲೆಂಡ್ ನಾಟಕೀಯ ಕುಸಿತ ಕಂಡು 16.4 ಓವರ್ಗಳಲ್ಲಿ 103 ರನ್ಗೆ ಸರ್ವಪತನ ಕಂಡಿತು
ರೋಹಿತ್ ಶರ್ಮ ಅವರು 37 ರನ್ ಪೂರ್ತಿಗೊಳಿಸುತ್ತಿದ್ದಂತೆ ಭಾರತ ತಂಡದ ನಾಯಕನಾಗಿ ಎಲ್ಲ ಮಾದರಿಯ ಕ್ರಿಕೆಟ್ ಸೇರಿ 5 ಸಾವಿರ ರನ್ ಪೂರೈಸಿದರು. ಈ ಸಾಧನೆ ಮಾಡಿದ ಭಾರತದ 5ನೇ ನಾಯಕ ಎನಿಸಿಕೊಂಡರು. ವಿರಾಟ್ ಕೊಹ್ಲಿ(12883) ಮೊದಲ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್(11207) ದ್ವಿತೀಯ ಸ್ಥಾನಿಯಾಗಿದ್ದಾರೆ
ವಿರಾಟ್ ಕೊಹ್ಲಿ-12,883 ರನ್
ಮಹೇಂದ್ರ ಸಿಂಗ್ ಧೋನಿ-11,207 ರನ್
ಮೊಹಮ್ಮದ್ ಅಜರುದ್ದೀನ್-8,095 ರನ್
ಸೌರವ್ ಗಂಗೂಲಿ-7,643 ರನ್
ರೋಹಿತ್ ಶರ್ಮ-5,033* ರನ್