ಕಾವೇರಿ ವನ್ಯದಾಮದ ಒಳಗೆ ವನ್ಯಜೀವಿಗಳ ಹತ್ಯೆಗೆ ಹೊಂಚು ಹಾಕುತ್ತಿದ್ದ ಮೂವರು ಆರೋಪಿಗಳಿಗೆ ಭಾರೀ ಗಾತ್ರದ ಹಾವೊಂದು ಕಾಟ ಕೊಟ್ಟಿದೆ. ಅರಣ್ಯದೊಳಗೆ ನುಸುಳಿದ್ದ ಗುಂಪಿನ ಒಬ್ಬನಿಗೆ ಹಾವು ಕಚ್ಚದಲ್ಲದೆ ಕೃತ್ಯ ನಡೆಸದಂತೆ ಹಾವು ಇನ್ನಿಲ್ಲದ ಕಾಟ ನೀಡಿದೆ ಎನ್ನಲಾಗಿದೆ.
ಈ ವೇಳೆ ಆತಂಕಗೊಂಡಿದ್ದ ಆರೋಪಿಗಳು ಕಾಡಿನೊಳಗೆ ನುಸುಳಿರುವುದಕ್ಕೆ ಕಂಡ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂಧಿಗಳು ಆರೋಪಿಗಳನ್ನು ಸಿನಿಮೀಯಾ ಮಾದರಿಯಲ್ಲಿ ಬಂಧಿಸಿದ್ದಾರೆ. ಕಾಡಿನ ಒಳಗೆ ಧಾಳಿಗೆ ತೆರಳಿದ್ದ ಸಂದರ್ಭದಲ್ಲಿ ಸೆಲ್ವನಾಥನ್ ಎಂಬಾತನಿಗೆ ಹಾವು ಕಚ್ಚಿದ್ದರಿಂದ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರವಾನಿಸಲಾಗಿದೆ
ಕಾರ್ಯಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ನಿರಂಜನ್, ಉಪ ವಲಯ ಅರಣ್ಯಾಧಿಕಾರಿ ಶ್ರೀನಿ, ಗಸ್ತು ವನಪಾಲಕರಾದ ಯಲಗೂರಪ್ಪ ಗುಬ್ಬಿ, ವಿವೇಕಾನಂದ ಸತ್ಯಪ್ಪ ಹಡಗಿನಾಳ, ರುದ್ರಾಪುರಂ, ಗೋರಿಸಾಬ ಸನದಿ, ರವಿಚಂದ್ರ ಎನ್. ದಾಸನಟ್ಟಿ ಪಾಲ್ಗೊಂಡಿದ್ದರು.