ಕಲರ್ಸ್ ಕನ್ನಡದಲ್ಲಿ ‘ಶಾಂತಂ ಪಾಪಂ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ನಿನ್ನೆ ನೋಡಿದ ಅನೇಕರಿಗೆ ರೇಣುಕಾ ಸ್ವಾಮಿ ಕೊಲೆ ಕೇಸ್ ನೆನಪಾಗಿದೆ. ‘ಬಾಸ್ ಹಾಗೂ ಅಕ್ಕ ಚೆನ್ನಾಗಿಯೇ ಇದ್ದರು. ನಟಿ ಬಂದಮೇಲೆ ಹೀಗೆ ಆಗಿದ್ದು’ ಎಂದು ದೇವನ ಸಹಾಯಕ ಹೇಳುತ್ತಾನೆ.
ದರ್ಶನ್ ಜೀವನದಲ್ಲೂ ಹೀಗೆಯೇ ಆಗಿದೆ. ನಟಿಗೆ ತೊಂದರೆ ಕೊಟ್ಟವನ ಕರೆ ತರುವಂತೆ ದೇವ ತನ್ನ ಸಹಚರರಿಗೆ ಹೇಳುತ್ತಾನೆ. ಆ ಬಳಿಕ ನಟಿಗೆ ತೊಂದರೆ ಕೊಟ್ಟವನ ಚಿತ್ರಹಿಂಸೆ ಕೊಟ್ಟು ಸಾಯಿಸಲಾಗುತ್ತದೆ. ಆ ಬಳಿಕ ದೇವ ಅರೆಸ್ಟ್ ಆಗುತ್ತಾನೆ. ಈ ರೀತಿಯಲ್ಲಿ ಧಾರಾವಾಹಿ ಮೂಡಿ ಬಂದಿದೆ.
ಧಾರಾವಾಹಿ ಎಪಿಸೋಡ್ ನೋಡಿದ ಅನೇಕರು ದರ್ಶನ್ ಕಥೆಗೆ ಹೋಲಿಕೆ ಮಾಡಿಕೊಂಡಿದ್ದಾರೆ. ಆಪ್ತೆ ಪವಿತ್ರಾಗೆ ಕಿರುಕುಳ ನೀಡಿದ್ದಕ್ಕೆ ರೇಣುಕಾ ಸ್ವಾಮಿಯನ್ನು ದರ್ಶನ್ ಅವರು ಕೊಲೆ ಮಾಡಿದರು ಎನ್ನಲಾಗಿದೆ. ಈ ಆರೋಪದಲ್ಲಿ ಅರೆಸ್ಟ್ ಆಗಿ ಅವರು ವಿಚಾರಣೆ ಎದುರಿಸುತ್ತಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಕೇಸ್ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದೆ. ದರ್ಶನ್ ಅವರು ಈ ಪ್ರಕರಣದಿಂದ ಸಾಕಷ್ಟು ತೊಂದರೆ