ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ಭರ್ಬರವಾಗಿ ಹತ್ಯೆ ಮಾಡಿದ್ದಾರೆ. ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಇನ್ನೂ ದರ್ಶನ್ ಜೈಲು ಸೇರಿ ವಾರ ಕಳೆದಿದ್ದು ಜೈಲಿನಲ್ಲಿ ಒಂಟಿತನ ಅನುಭವಿಸುತ್ತಿದ್ದಾರೆ. ಈ ಮಧ್ಯೆ ದಾಸನಿಗೆ ತಮ್ಮ ಹಾಗೂ ತಾಯಿಯ ನೆನಪು ಆಗುತ್ತಿದೆಯಂತೆ.
ವಾರದಲ್ಲಿ ಎರಡು ಬಾರಿ ದರ್ಶನ್ ಅವರನ್ನು ಮಾತನಾಡಿಸಲು ಪೊಲೀಸರು ಅವಕಾಶ ನೀಡಿದ್ದಾರೆ. ಈಗಾಗಲೇ ದರ್ಶನ್ ಪತ್ನಿ ಮತ್ತು ಪುತ್ರ ಅವರನ್ನು ನೋಡಿಕೊಂಡು ಹೋಗಿದ್ದಾರೆ. ಇದಾದ ನಂತರ ದರ್ಶನ್ ಬೇರೆ ಯಾರನ್ನೂ ನೋಡಲು ಮನಸ್ಸು ಮಾಡ್ತಿಲ್ಲ. ಆದರೆ ತಾಯಿ,ತಮ್ಮ ಬಂದರೆ ಮಾತ್ರ ಅವಕಾಶ ನೀಡಿ ಎಂದು ಜೈಲು ಅಧಿಕಾರಿಗಳ ಬಳಿ ಕೇಳಿಕೊಂಡಿದ್ದಾರಂತೆ. ದರ್ಶನ್ ಈ ಪ್ರಕರಣಕ್ಕೂ ಮುನ್ನ ತಾಯಿ ಮತ್ತು ತಮ್ಮನಿಂದ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿತ್ತು.
ಪೊಲೀಸ್ ಕಸ್ಟಡಿಯಲ್ಲಿದ್ದಾಗ , ತಾಯಿ ಮೀನಾ ಆಗಲಿ, ತಮ್ಮ ದಿನಕರ್ ಆಗಲಿ ದರ್ಶನ್ ನೋಡಲು ಬಂದಿರಲಿಲ್ಲ. ಆದರೆ ಇದೀಗ ಜೈಲಿನಲ್ಲಿರುವ ದರ್ಶನ್ ಗೆ ಪದೇ ಪದೇ ತಾಯಿ ಹಾಗೂ ತಮ್ಮನ ನೆನಪು ಕಾಡುತ್ತಿದೆಯಂತೆ.ಒಮ್ಮೆಯಾದರು ಅವರು ಬಂದ ನೋಡಿ ಹೋಗಲಿ ಎಂದು ದರ್ಶನ್ ಮರಗುತ್ತಿದ್ದಾರೆ.
ದರ್ಶನ್ ಪತ್ನಿ, ಪುತ್ರ ಭೇಟಿ ಮಾಡಿ ಹೊರಟ ಬಳಿಕ, ನಟ ವಿನೋದ್ ಪ್ರಭಾಕರ್ ಅವರು ಸ್ನೇಹಿತರ ಜತೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ನಿರ್ಗಮಿಸಿದ್ದರು. ಆ ಬಳಿಕ ದರ್ಶನ್ ರನ್ನು ನೋಡಲು ಸಾಕಷ್ಟು ಅಭಿಮಾನಿಗಳು ಜೈಲಿನ ಬಳಿ ತೆರಳಿದ್ದರು.ಆದರೆ ಯಾರಿಗೂ ಅವಕಾಶ ನೀಡಿರಲಿಲ್ಲ.