9 ವರ್ಷದ ಬಾಲಕನೊಬ್ಬ ಐಪಿಎಸ್ ಅಧಿಕಾರಿ ಆಗಿದ್ದಾನೆ.
ಉತ್ತರಪ್ರದೇಶದ ವಾರಾಣಾಸಿಯ 9 ವರ್ಷದ ಬಾಲಕ ರಣವೀರ್ ಭಾರತಿಗೆ ದೊಡ್ಡವನಾದ ಮೇಲೆ ಓದಿ ಐಪಿಎಸ್ ಅಧಿಕಾರಿಯಾಗಬೇಕೆಂಬ ಕನಸಿತ್ತು.
ಆದರೆ ಆತ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿರುವುದು ಇತ್ತೀಚೆಗೆ ತಿಳಿದಿದೆ. ಅದಕ್ಕಾಗಿ ಆತ ವಾರಣಾಸಿಯ ಮಹಾಮಾನ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಾಗಾಗಿ ಆತ ಎಷ್ಟೇ ಪ್ರಯತ್ನಿಸಿದರೂ ಆತನಿಗೆ ಐಪಿಎಸ್ ಅಧಿಕಾರಿಯಾಗಲು ಸಾಧ್ಯವಿಲ್ಲ ಎಂದು ಅರಿತು ಬೇಸರಗೊಂಡಿದ್ದಾನೆ.
ಆದರೆ ವಾರಣಾಸಿ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿಯೂಷ್ ಮೊರ್ಡಿಯಾ ಈ ವಿಚಾರ ತಿಳಿದು ಆತನ ಕನಸನ್ನು ನನಸು ಮಾಡಲು ಒಂದು ದಿನದ ಮಟ್ಟಿಗೆ ಐಪಿಎಸ್ ಅಧಿಕಾರಿಯಾಗಲು ಅನುಮತಿ ನೀಡಿದ್ದಾರೆ. ಹಾಗಾಗಿ ಬಾಲಕ ಖಾಕಿ ಸಮವಸ್ತ್ರ ಧರಿಸಿ ಐಪಿಎಸ್ ಅಧಿಕಾರಿಯ ಸೀಟಿನಲ್ಲಿ ಕುಳಿತುಕೊಂಡು ಅಧಿಕಾರಿಗಳಿಗೆ ಹಸ್ತಲಾಘವ ಮಾಡಿದ್ದಾನೆ
ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಎಡಿಜಿ ವಲಯ ವಾರಣಾಸಿಯ ಅಧಿಕೃತ ಟ್ವೀಟರ್ ಖಾತೆಯಲ್ಲಿ ಜೂನ್ 26ರಂದು ಪೋಸ್ಟ್ ಮಾಡಲಾಗಿದೆ. ಈ ವಿಡಿಯೊ ವೈರಲ್ ಆಗಿದ್ದು, ಬಾಲಕನ ಆಸೆಯನ್ನು ಪೂರ್ತಿ ಮಾಡಿದ