ತೂಕ ಇಳಿಸಿಕೊಳ್ಳಲು ಸಾಕಷ್ಟು ಜನರು ವರ್ಕೌಟ್ ಮಾಡುತ್ತಾರೆ. ವಾಕಿಂಗ್, ಯೋಗ, ಕಾರ್ಡಿಯೋ, ಜುಂಬಾ ಮುಂತಾದ ರೀತಿಯ ವ್ಯಾಯಾಮ ಮಾಡುತ್ತಾರೆ. ಆದರೆ ಚೆನ್ನಾಗಿ ವ್ಯಾಯಾಮ ಮಾಡಿದರೂ ಸರಿಯಾದ ಆಹಾರ ಪದ್ಧತಿ ಅನುಸರಿಸುವುದು ಬಹಳ ಮುಖ್ಯ. ಪೌಷ್ಠಿಕಾಂಶವುಳ್ಳ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಇದರಿಂದ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು.
ಬಹಳಷ್ಟು ಜನರು ತೂಕ ನಷ್ಟಕ್ಕಾಗಿ ಡಯೆಟ್ ಮಾಡುತ್ತಾರೆ. ಕಡಿಮೆ ಪ್ರಮಾಣದಲ್ಲಿ ಹೆಚ್ಚು ಪೌಷ್ಠಿಕ ಆಹಾರಗಳನ್ನು ಸೇವಿಸುತ್ತಾರೆ. ಅದರಲ್ಲೂ ತೂಕ ನಷ್ಟಕ್ಕೆ ಆರೋಗ್ಯಕರ ಉಪಹಾರ ಸೇವಿಸುವುದು ಬಹಳ ಮುಖ್ಯ ಎಂದೇ ಹೇಳಲಾಗುತ್ತದೆ. ಬೆಳಗಿನ ಕಡುಬಯಕೆಗಳನ್ನು ಪೂರೈಸುವುದರ ಜೊತೆಗೆ ತೂಕ ನಷ್ಟ ಪ್ರಯತ್ನಗಳಿಗೆ ಕೊಡುಗೆ ನೀಡುವ ಕೆಲವು ಪರಿಣಾಮಕಾರಿ ಉಪಹಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ
ಸ್ಮೂಥಿಗಳು: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಸ್ಮೂಥಿಗಳು ಹೆಚ್ಚಿನ ಪ್ರಯೋಜನ ನೀಡಬಹುದು. ನೀವು ಆರೋಗ್ಯಕರ ಸ್ಮೂಥಿಗಳನ್ನು ಕುಡಿಯುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಬಹುದು. ಬೆಳಗ್ಗೆ ವಿಶೇಷವಾಗಿ ಏನನ್ನಾದರೂ ತಯಾರಿಸಲು ನಿಮಗೆ ಸಮಯದ ತೊಂದರೆ ಇದ್ದರೆ ಈ ಸ್ಮೂಥಿಗಳು ನಿಮಗೆ ಸಮಯ ಉಳಿಸುವುದರ ಜೊತೆಗೆ ಹೆಚ್ಚು ಆರೋಗ್ಯಕರವೂ ಆಗಿದೆ. ನೀವು ಹಣ್ಣುಗಳು, ಬೀಜಗಳು, ತರಕಾರಿಗಳು, ಡ್ರೈಫ್ರೂಟ್ಸ್, ಮತ್ತು ಹಾಲಿನಿಂದ ಮಾಡಿದ ಸ್ಮೂಥಿಗಳನ್ನು ಪ್ರಯತ್ನಿಸಬಹುದು.
ಬೇಯಿಸಿದ ಮೊಟ್ಟೆಗಳು: ಬೆಳಗಿನ ಉಪಹಾರಕ್ಕೆ ಬೇಯಿಸಿದ ಮೊಟ್ಟೆಗಳು ಉತ್ತಮ ಆಯ್ಕೆಯಾಗಿದೆ. ಅವು ಪ್ರೋಟೀನ್ನಲ್ಲಿ ಸಮೃದ್ಧವಾಗಿವೆ. ಇದು ನಿಮಗೆ ದಿನವಿಡೀ ಶಕ್ತಿಯಿಂದಿರಲು ಸಹಾಯ ಮಾಡುತ್ತವೆ. ನೀವು ಇದನ್ನು ಬೇರೆ ಬೇರೆ ವಿಧಾನದಲ್ಲಿ ತಿನ್ನಬಹುದು. ಆದರೆ ನೀವು ತೂಕ
ಇಳಿಸಿಕೊಳ್ಳಲು ಬಯಸಿದರೆ, ಬೆಳಿಗ್ಗೆ ಬೇಯಿಸಿದ ಮೊಟ್ಟೆಯನ್ನು ತಿನ್ನುವುದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಕಾಟೇಜ್ ಚೀಸ್: ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿರುವವರು ನಿಮ್ಮ ಉಪಹಾರದಲ್ಲಿ ಕಾಟೇಜ್ ಚೀಸ್ಅನ್ನು ಸೇರಿಸಬಹುದು. ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಪ್ರೋಟೀನ್ನಲ್ಲಿ ಸಮೃದ್ಧವಾಗಿರುವ ಕಾಟೇಜ್ ಚೀಸ್ ನಿಮಗೆ ಉತ್ತಮ ಉಪಹಾರ ಆಯ್ಕೆಯಾಗಿದೆ. ಅದರ ರುಚಿಯನ್ನು ಹೆಚ್ಚಿಸಲು ನೀವು ಕೆಲವು ಡ್ರೈ ಫ್ರೂಟ್ಸ್ ಮತ್ತು ಬೀಜಗಳನ್ನು ಸೇರಿಸಬಹುದು
ಓಟ್ ಮೀಲ್: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಓಟ್ ಮೀಲ್ ಉತ್ತಮ ಆಯ್ಕೆಯಾಗಿದೆ. ನಿಮ್ಮ ದಿನವನ್ನು ಪ್ರಾರಂಭಿಸಲು ಇದು ಹಗುರವಾದ ಮತ್ತು ಆರೋಗ್ಯಕರ ಆಯ್ಕೆಯಾಗಿದೆ. ಸಾಕಷ್ಟು ಹಣ್ಣುಗಳು ಮತ್ತು ಬೀಜಗಳೊಂದಿಗೆ ಮಾಡಿದ ಓಟ್ ಮೀಲ್ ತಿನ್ನಲು ರುಚಿಕರವಾಗಿಯೂ ಇರುತ್ತದೆ.
ಫ್ರೂಟ್ಸ್ ಸಲಾಡ್: ನಿಮ್ಮ ಆರೋಗ್ಯದ ಜೊತೆಗೆ ತೂಕ ನಷ್ಟಕ್ಕೆ ಉತ್ತಮ ಉಪಹಾರವನ್ನು ನೀವು ಹುಡುಕುತ್ತಿದ್ದರೆ, ನೀವು ಹಣ್ಣು ಸಲಾಡ್ಅನ್ನು ಪ್ರಯತ್ನಿಸಬಹುದು. ಮುಂಜಾನೆ ಇವುಗಳನ್ನು ತಿಂದರೆ ಇಡೀ ದಿನ ನಿಮಗೆ
ಚೈತನ್ಯ ಸಿಗುತ್ತದೆ. ಹಾಗೆಯೇ ನೀವು ಉಲ್ಲಾಸದಿಂದ ಇರುತ್ತೀರಿ. ಫ್ರೂಟ್ಸ್ ಸಲಾಡ್ಗಾಗಿ ನೀವು ನಿಮ್ಮಿಷ್ಟದ ಹಣ್ಣುಗಳನ್ನು ಕಟ್ ಮಾಡಿ ಅದಕ್ಕೆ ಸ್ವಲ್ಪ ಚಾಟ್ ಮಸಾಲವನ್ನು ಬೆರೆಸಿ ತಿನ್ನಬಹುದು.
ಒಟ್ಟಾರೆಯಾಗಿ ತೂಕ ನಷ್ಟಕ್ಕೆ ಪ್ರಯತ್ನಿಸುವವರು ಸರಿಯಾದ