ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲಲು ಸೇರಿದ್ದಾರೆ. ದರ್ಶನ್ ವಿರುದ್ಧ ಗಂಭೀರ ಆರೋಪವಿದ್ದು ಸದ್ಯಕ್ಕಂತೂ ಜಾಮೀನು ಸಿಗೋದು ಅನುಮಾನ ಎನ್ನಲಾಗುತ್ತಿದೆ. ಈ ಮಧ್ಯೆ ಈ ವರ್ಷ ಅಪಾಯ ಇದೆ ಅನ್ನೋದು ದರ್ಶನ್ಗೆ ಮೊದಲೇ ಗೊತ್ತಿತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ.
ಎರಡು ತಿಂಗಳ ಹಿಂದೆ ನಟ ದರ್ಶನ್ ಸುದರ್ಶನ ಹೋಮ ಮಾಡಿಸಿದ್ದರು. ನಕಾರಾತ್ಮಕ ಅಂಶಗಳನ್ನು ನಾಶಮಾಡಲು, ಶತ್ರುಗಳ ಮೇಲೆ ವಿಜಯ ಪ್ರಾಪ್ತಿಗೆ ಅಥವಾ ಮಾಟ-ಮಂತ್ರ ಮಾಡಿಸಿರೋ ಅನುಮಾನ ಇದ್ದರೆ ಈ ಹೋಮ ಮಾಡಿಸಲಾಗುತ್ತದೆ. ದರ್ಶನ್ ಕೂಡ ಇದೇ ಹೋಮ ಮಾಡಿಸಿದ್ದರು ಎನ್ನಲಾಗಿದೆ.
ಅರೆಸ್ಟ್ ಆಗುವುದಕ್ಕೂ ಮುನ್ನ ಅವರು ಮನೆಯನ್ನು ಹೊಸದಾಗಿ ರಿನೋವೇಷನ್ ಮಾಡಿದ್ದರು. ಹೀಗಾಗಿ, ಅವರು ವಿಶೇಷ ಪೂಜೆ ಇಟ್ಟುಕೊಂಡಿದ್ದರು. ಈ ಕಾರಣದಿಂದಲೇ ವಿಜಯಲಕ್ಷ್ಮಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಕೊಲೆ ನಡೆದ ಬಳಿಕ ದರ್ಶನ್ ಪೂಜೆಯಲ್ಲಿ ಭಾಗಿ ಆಗಿದ್ದರು.
ಸಿನಿಮಾಗಳಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಇಡದಂತೆ ಮಿಲನಾ ಪ್ರಕಾಶ್ಗೆ ದರ್ಶನ್ ಆಪ್ತರು ಹೇಳಿದ್ದರಂತೆ. ಜಾಗ್ರತೆ ವಹಿಸಿದರೂ ದರ್ಶನ್ಗೆ ಪೆಟ್ಟಾಗಿತ್ತು. ಅವರ ಕೈಗೆ ಪೆಟ್ಟಾಗಲು ಇದೂ ಕಾರಣ. 2017-18ರಿಂದ ದರ್ಶನ್ ಅವರಿಗೆ ಸಾಡೇ ಸಾತಿ ಇದೆ. ಜೂನ್-ನವೆಂಬರ್ 15ವರೆಗೆ ಅವರು ಮತ್ತಷ್ಟು ತೊಂದರೆ ಅನುಭವಿಸಲಿದ್ದಾರೆ. ಹಣ, ಮಾತು, ಆರೋಗ್ಯ, ಸಾಂಸಾರಿಕವಾಗಿ ಸಮಸ್ಯೆ ತೀವ್ರವಾಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಇದೀಗ ದರ್ಶನ್ ಬಂಧನಕ್ಕೆ ಒಳಗಾಗಿರುವುದು ಕೂಡ ಇದೇ ಕಾರಣವಿರಬಹುದು ಎನ್ನಲಾಗುತ್ತಿದೆ.