ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಗಾಗಿ ರಾಜ್ಯ ಸರ್ಕಾರವು ಆದಿಶೋಧನೆಯನ್ನು ಪ್ರಕಟಿಸಿದ್ದು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹು ದಾಗಿದೆ. ಅದರಂತೆ ಈ ಹುದ್ದೆಗಳಿಗೆ ನಿಗದಿಪಡಿಸಿರುವ ದಿನಾಂಕ ಹಾಗೂ ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀವ ನೀವು ತಿಳಿದುಕೊಳ್ಳಬಹುದು.
ಜಿಲ್ಲಾ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಿ, ಆಯ್ಕೆಪಟ್ಟಿ ಬಿಡುಗಡೆ ಮಾಡಲಿವೆ. ಯಾವ ಜಿಲ್ಲೆ ಯಾವಾಗ ಅಧಿಸೂಚನೆ ಹೊರಡಿಸಲಿದೆ ಎಂಬುದನ್ನು ಕಾದುನೋಡಬೇಕಿದೆ. ಈ ಕುರಿತು ಆಯಾ ಜಿಲ್ಲೆಯ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಆಯಾ ಜಿಲ್ಲಾಡಳಿತದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.
ಹುದ್ದೆಯ ಹೆಸರು
- ಕರವಸೂಲಿಗಾರರು / ಬಿಲ್ ಕಲೆಕ್ಟರ್
- ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳು
- ವಾಟರ್ ಆಪರೇಟರ್
- ಸ್ವಚ್ಛತಾಗಾರರು
ಶೈಕ್ಷಣಿಕ ವಿದ್ಯಾರ್ಹತೆ :
- ದ್ವಿತೀಯ ಪಿಯುಸಿ ಪಾಸ್ ಜತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು, ಪ್ರಮಾಣ ಪತ್ರ ಹೊಂದಿರುವುದು
- ಕನಿಷ್ಠ 7ನೇ ತರಗತಿ.
- ಯಾವುದೇ ವಿದ್ಯಾರ್ಹತೆ ಕಡ್ಡಾಯವಲ್ಲ.
ಈ ಮೇಲಿನ ಹುದ್ದೆಗಳಿಗೆ ಜಿಲ್ಲಾ ಪಂಚಾಯಿತಿ ಇಂದ ಈಗಾಗಲೇ ಅನುಮೋದನೆ ಹೊಂದಿರುವ ಸದರಿ ನೌಕರರ ವಯೋನಿವೃತ್ತಿಯಿಂದ, ಮುಂಬಡ್ತಿಯಿಂದ ಅಥವಾ ಮರಣಹೊಂದಿರುವ ಕಾರಣಗಳಿಂದಾಗಿ ಖಾಲಿಯಾಗಿದ್ದಲ್ಲಿ, ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದ ಮಾದರಿಯಲ್ಲಿ ಖಾಲಿಯಾದ ಈ ಮೇಲಿನ ನಾಲ್ಕು ವೃಂದದ ಹುದ್ದೆಗಳಲ್ಲಿ ಯಾರು ಕಾರ್ಯನಿರ್ವಹಿಸದೇ ಇದ್ದಲ್ಲಿ,
ಸದರಿ ಹುದ್ದೆಗೆ ಒಂದು ಸಿಬ್ಬಂದಿಯನ್ನು ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 886 ಗ್ರಾಪಂಕಾ 2016 ದಿನಾಂಕ 29-06-2020 ರಲ್ಲಿ ಸೂಚಿಸಿರುವಂತೆ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳಲು ಎಲ್ಲಾ ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದೆ. ಮುಂದುವರೆದು, ನೇಮಕಾತಿಯ ಮೀಸಲಾತಿಯನ್ನು ಕಡ್ಡಾಯವಾಗಿ ಅನುಸರಿಸಲು ಇಲಾಖೆ ಕೋರಿದೆ.